ರಾಜ್ಯಾಧ್ಯಕ್ಷರ ಆಯ್ಕೆ ಸೋನಿಯಾ ನಿರ್ಣಯ ಅಂತಿಮ
ನವದೆಹಲಿ,
ಸೆ.14: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸುದ್ದಿಯ ಬೆನ್ನಲ್ಲೇ ಇತರೆ ರಾಜ್ಯಗಳಲ್ಲಿನ ಕಾಂಗ್ರೆಸ್ ಕಮಿಟಿ ಯಲ್ಲಿನ ಆಯ್ಕೆ ಗೊಂದಲ ಕೊಂಚ ತಿಳಿಗೊಂಡಿರುವುದು ಕಂಡು ಬಂದಿದೆ. ಹರ್ಯಾಣ, ಉತ್ತರಪ್ರದೇಶ ಸೇರಿದಂತೆ ಕೆಲ ರಾಜ್ಯಗಳ ಅಧ್ಯಕ್ಷರ ಆಯ್ಕೆ ಹೊಣೆಗಾರಿಕೆಯನ್ನು ಸೋನಿಯಾ ಮೇಡಂ ಹೆಗಲೇರಿದೆ. id="toptextpromo">ಹರ್ಯಾಣ,
ಹಿಮಾಚಲ ಪ್ರದೇಶ, ಉತ್ತರಾಖಂಡ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ಆಯ್ಕೆ ಯ ಜೊತೆಗೆ ಇದೀಗ ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶದ ಅಧ್ಯಕ್ಷರನ್ನು ಕೂಡಾ ಸೋನಿಯಾಜಿ ಆಯ್ಕೆ ಮಾಡಬೇಕಾಗಿದೆ. id='are-slot-1' class='oiad oi-axt oiadv'> id='top-searched-articles'>ಉತ್ತರ
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ರಾಜ್ಯ ಸದಸ್ಯರ ಪದಗ್ರಹಣ ಸಮಾರಂಭದ ನಂತರ ಮಾತನಾಡಿದ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ದಿಗ್ವಿಜಯ್ ಸಿಂಗ್, ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಸೋನಿಯಾಜಿ ಅವರ ಕೈಲಿದೆ ಎಂದರು.











Click it and Unblock the Notifications