ಸಂಸದನ ಸಂಸಾರದಲ್ಲಿ ವೇಶ್ಯಾವಾಟಿಕೆ ವಾಸನೆ

ಬ್ರಿಟಿಷ್ ಸಂಸದ ಮೈಕ್ ವೆದರ್ಲೆ ಅವರ ಬ್ರೆಜಿಲಿಯನ್ ಪತ್ನಿ ಕ್ಲಾರಾ ಅವರು ಸೆಕ್ಸ್ ವರ್ಕರ್ ಆಗಿ ದುಡಿಯುತ್ತಿದ್ದು, ಪ್ರತಿ ಗಂಟೆಗೆ 70 ಪೌಂಡ್ ಬೆಲೆ ನಿಗದಿಪಡಿಸಿದ್ದಾರೆ ಎಂದು ಸಂಡೇ ಮಿರರ್ ಹೇಳಿದೆ.
ಕಾಂಡೋಮ್ ಕೂಡಾ ಬಳಸದೆ ಓರಲ್ ಸೆಕ್ಸ್ ನಲ್ಲಿ ಕ್ಲಾರಾ ತೊಡಗುತ್ತಾರೆ. ನಮ್ಮ ವರದಿಗಾರ ದಕ್ಷಿಣ ಲಂಡನ್ ಮಸಾಜ್ ಪಾರ್ಲರ್ ನಲ್ಲಿ ಆಕೆಯನ್ನು ಭೇಟಿ ಮಾಡಿದಾಗ ಸೆಕ್ಸ್ ಚಟುವಟಿಕೆಗಳ ಸವಿವರ ಬಹಿರಂಗಗೊಂಡಿತು ಎಂದು ಮಿರರ್ ಪ್ರಕಟಿಸಿದೆ.
2010ರ ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಪರ ಸಂಸದ ಮೈಕ್ ಮತ ಪ್ರಚಾರ ಮಾಡಿದ್ದರು. ರಿಯೋ ಡಿಜಿನೈರೋಗೆ ವಾಣಿಜ್ಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ಲಾರಾಳ ಪರಿಚಯವಾಯಿತು. ಆಲ್ಲಿ ಕೂಡಾ ಆಕೆ ಇದೇ ಉದ್ಯಮದಲ್ಲಿ ತೊಡಗಿದ್ದಳು.
2003 ರಲ್ಲಿ ಆಕೆಯನ್ನು ಬ್ರಿಟನ್ ಗೆ ಕರೆತಂದು ಮೈಕ್ ಮದುವೆ ಯಾದರು. ಆದರೆ, ತಮ್ಮ ಕಾಮನೆಗಳನ್ನು ಹತ್ತಿಕ್ಕಿಕೊಳ್ಳಲಾಗದ ಕ್ಲಾರಾ, ಅತ್ತ ತನ್ನ ಪತಿ ಚುನಾವಣೆ ಪ್ರಚಾರದಲ್ಲಿ ವ್ಯಸ್ತನಾದ ಸಂದರ್ಭದಲ್ಲಿ ಫೆಬ್ರವರಿ 2010 ರ ಸುಮಾರಿಗೆ ಮೈಮಾರಿಕೊಳ್ಳುವ ದಂಧೆಗೆ ಮತ್ತೆ ಇಳಿದಳು.
ಆದರೆ, ಆಕೆ ವೇಶ್ಯೆ ಆಗಿದ್ದಳು ಹಾಗೂ ಈಗಲೂ ಅದೇ ಕೆಲಸದಲ್ಲಿದ್ದಾಳೆ ಎಂಬುದು ತನಗೆ ತಿಳಿದೇ ಇಲ್ಲ. ನಾವು ಸಂತೋಷದಿಂದಲೇ ಕಾಲ ಕಳೆದಿದ್ದೇವೆ ಎಂದು ಸಂಸದ ಮೈಕ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications