ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಮಾಜಿ ಪಿಎಂ ಬ್ಲೇರ್ ಮೇಲೆ ಚಪ್ಪಲಿ ಎಸೆತ

By Staff
|
Google Oneindia Kannada News

ಡಬ್ಲಿನ್, ಸೆ.4: ಐರ್ಯಲ್ಯಾಂಡ್‌ ನ ಡಬ್ಲಿನ್ ನಗರಕ್ಕೆ ಶನಿವಾರ ಭೇಟಿ ನೀಡಿದ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮೇಲೆ ಯುದ್ಧ ವಿರೋಧಿ ಪ್ರದರ್ಶನಕಾರರು ಚಪ್ಪಲಿ ಹಾಗೂ ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ವ್ಯಕ್ತಪಡಿಸಿದರು. ಭರ್ಜರಿಯಾಗಿ ಮಾರಾಟವಾಗುತ್ತಿರುವ ತಮ್ಮ ಆತ್ಮಕಥೆ ಕೃತಿಯ ಬಹಿರಂಗ ಪ್ರಚಾರಕ್ಕಾಗಿ ಬ್ಲೇರ್ ಇಲ್ಲಿನ ಪುಸ್ತಕ ಮಳಿಗೆಯೊಂದಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಡಬ್ಲಿನ್ ನಗರದ ಕೇಂದ್ರ ಸ್ಥಳದಲ್ಲಿರುವ ಈ ಪುಸ್ತಕ ಮಳಿಗೆಯ ಮುಂದೆ ಜಮಾಯಿಸಿದ್ದ ನೂರಾರು ಪ್ರತಿಭಟನ ಕಾರರು ಯುದ್ಧ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಬ್ಲೇರ್ ಕೈಗಳು ರಕ್ತ ತುಂಬಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಬ್ಲೇರ್ ಕಾರಿನಿಂದ ಹೊರಬರುತ್ತಿದ್ದಂತೆಯೇ, ಅವರ ಮೇಲೆ ಪ್ರತಿಭಟನಕಾರರು ಚಪ್ಪಲಿ ಮತ್ತು ಮೊಟ್ಟೆಗಳನ್ನು ಎಸೆದರು. ಆದರೆ ಅದ್ಯಾವುದೂ ಬ್ಲೇರ್ ಅವರಿಗೆ ಬೀಳಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪುಸ್ತಕ ಮಳಿಗೆಯಲ್ಲಿ ಮಾರಾಟಕ್ಕಿಟ್ಟಿರುವ ತನ್ನ ಕೃತಿಯ ಪ್ರತಿಗಳಿಗೆ ಬ್ಲೇರ್ ಸಹಿ ಹಾಕುವ ಈ ಔಪಚಾರಿಕ ಸಮಾರಂಭಕ್ಕೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಘಟನೆಯ ಬಳಿಕ ಪುಸ್ತಕದ ಮಳಿಗೆಯನ್ನು ಸಂದರ್ಶಿಸುವ ಗ್ರಾಹಕರ ಬ್ಯಾಗ್‌ಗಳು ಹಾಗೂ ಮೊಬೈಲ್ ಗಳನ್ನು ತಪಾಸಣೆ ನಡೆಸಲಾಯಿತು.

ಈ ಆತ್ಮಕಥೆಯಲ್ಲಿ ಬ್ಲೇರ್ ಪ್ರಧಾನಿಯಾಗಿ ತನ್ನ ಒಂದು ದಶಕದ ಅ ಕಾಲಾವಧಿಯಲ್ಲಿ 2003ರ ಇರಾಕ್ ಆಕ್ರಮಣವು ಸೇರಿದಂತೆ ತನ್ನ ಕೆಲವು ವಿವಾದಾಸ್ಪದ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಶನಿವಾರ ಬಿಬಿಸಿ ಸುದ್ದಿವಾಹಿನಿ ಯಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಬ್ಲೇರ್, ಅಪ್ಘನ್ ಹಾಗೂ ಇರಾಕ್ ಮೇಲೆ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸಿದ ದಾಳಿಗಳು ಜಾಗತಿಕ ಭಯೋತ್ಪಾದನೆಯನ್ನು ಇಮ್ಮಡಿಗೊಳಿಸಿತೆಂಬ ಆರೋಪವನ್ನು ನಿರಾಕರಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X