ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಗೆ ತೀವ್ರ ಆರ್ಥಿಕ ಮುಗ್ಗಟ್ಟು : ಅಮೆರಿಕಾ

By Mahesh
|
Google Oneindia Kannada News

US general claims Taliban facing financial crisis
ವಾಷಿಂಗ್ಟನ್, ಸೆ.4: ಅಫ್ಘಾನಿಸ್ತಾನದಲ್ಲಿ ನ್ಯಾಟೋ ಪಡೆಗಳ ವಿರುದ್ದ ಹೋರಾಟ ನಡೆಸುತ್ತಿರುವ ಉಗ್ರ ಸಂಘಟನೆ ತಾಲಿಬಾನ್ ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಅಮೆರಿಕಾದ ಜನರಲ್ ಒಬ್ಬರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕಾದ ಮರೈನ್ ಕಾರ್ಪ್ಸ್ ಮೇಜರ್ ಜನರಲ್ ರಿಚರ್ಡ್ ಮಿಲ್ಸ್ ಪ್ರಕಾರ 'ನ್ಯಾಟೋ ಪಡೆಗಳು ತಾಲಿಬಾನ್ ನ ಅಫೀಮು ವಹಿವಾಟಿನ ಮೇಲೆ ತೀವ್ರ ನಿಗಾ ಇರಿಸಿದ್ದು ಇದರಿಂದ ಅಕ್ರಮ ಲಾಭ ಗಳಿಸಿ ಭಯೋತ್ಪಾದನೆಗೆ ಬಳಸಿಕೊಳ್ಳುತಿದ್ದ ತಾಲಿಬಾನ್ ಗೆ ತೀವ್ರ ಹಿನ್ನಡೆ ಆಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿದೆ ಎಂದು ಹೇಳಿದರು.

ಭಯೋತ್ಪಾದನೆಗೆ ಹಣ ಹೊಂದಿಸಲು ತಾಲಿಬಾನ್ ಗೆ ಅಫೀಮಿನ ಕಳ್ಳ ಬೆಳೆ ಮತ್ತು ಸಾಗಾಟವೇ ಪ್ರಮುಖ ಮಾರ್ಗವಾಗಿದ್ದು, ಇದಲ್ಲದೆ ಉಗ್ರ ಸಂಘಟನೆಗಳೂ ದೇಣಿಗೆ ನೀಡುತ್ತಿದ್ದವು. ಆದಾಯ ಕಡಿಮೆಯಾಗಿರುವುದರಿಂದ ತಾಲಿಬಾನ್ ಉಗ್ರರು ಸುಧಾರಿತ ಸ್ಪೋಟಕ ಡಿವೈಸ್ (IED) ಗಳ ಬಳಕೆಯನ್ನು ಕಡಿಮೆ ಮಾಡಿದ್ದು ಸರಳ ಬುಲೆಟ್ ಗಳನ್ನು ಬಳಸುತ್ತಿದ್ದಾರೆ ಎಂದೂ ಜನರಲ್ ಹೇಳಿದರು.

ಈ ಬುಲೆಟ್ ಗಳು ಅಗ್ಗವಾಗಿದ್ದು , ಸುಧಾರಿತ ಸ್ಪೋಟಕಗಳನ್ನು ಖರೀದಿಸಲು ಹೆಚ್ಚು ಹಣ ವ್ಯಯ ಮಾಡಬೇಕಾಗಿದೆ . ತಾಲಿಬಾನ್ ಗೆ ನಿಖರವಾಗಿ ಎಷ್ಟು ಹಣದ ಕೊರತೆ ಇದೆ ಎಂದು ಹೇಳುವುದು ಕಷ್ಟ ಎಂದ ಅವರು ಇಲ್ಲಿ ಭಯೋತ್ಪದನಾ ಚಟುವಟಿಕೆಗಳು ಒಂದು ವರ್ಷದಿಂದ ಅರ್ಧದಷ್ಟು ಕಡಿಮೆ ಆಗಿವೆ ಎಂದರು .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X