ಮಕ್ಕಳಿಗೆ ವಿಷ ಕುಡಿಸಿ ಪತ್ನಿ ಹತ್ಯೆಗೆ ಯತ್ನ
ಬಿಜಾಪುರ,
ಸೆ. 4 : ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದ ಪತಿಯೊಬ್ಬ ಇಬ್ಬರು ಮಕ್ಕಳನ್ನು ವಿಷ ಕುಡಿಸಿ ಹತ್ಯೆಗೈದು ಪತ್ನಿಯನ್ನು ಕೊಲೆ ಮಾಡುವ ವಿಫಲ ಯತ್ನಿಸಿದ ದಾರುಣ ಘಟನೆ ಜಿಲ್ಲೆಯ ಹನುಮಸಾಗರದಲ್ಲಿ ಶುಕ್ರವಾರ ನಡೆದಿದೆ. id="toptextpromo">ಇಬ್ಬಳನ್ನು
ಕೊಲೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಮಗನಿಗೆ ಏಳು ವರ್ಷವಾದರೆ, ಇನ್ನೊಬ್ಬನಿಗೆ 3 ವರ್ಷ. ಪತ್ನಿಯ ಜೊತೆಗೆ ಅನಾವಶ್ಯಕ ಜಗಳ ಕಾದ ಪತಿ ನಂತರ ಮಕ್ಕಳ ಹತ್ಯೆಗೆ ಮುಂದಾಗಿದ್ದಾನೆ. ಪತ್ನಿಗೂ ವಿಷ ಕುಡಿಸಿದ್ದಾನೆ. ಆದರೆ, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಪತ್ನಿ ಬದುಕುಳಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಕ್ಕಳ
ಮರಣೋತ್ತರ ಪರೀಕ್ಷೆಗೆ ನಡೆಸಲಾಗುತ್ತಿದ್ದು, ಆ ಇಬ್ಬರೂ ಮಕ್ಕಳಿಗೂ ವಿಷ ಕುಡಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಪತ್ನಿ ಬದುಕುಳಿದಿದ್ದಾಳೆ. ಮೃತಪಟ್ಟವರ ಹೆಸರು ಸೇರಿದಂತೆ ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications