ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ

By Mahesh
|
Google Oneindia Kannada News

Ramjanmbhoomi-Babri Masjid Case
ಅಯೋಧ್ಯಾ, ಸೆ.2: ರಾಮಜನ್ಮಭೂಮಿ ಬಾಬ್ರಿ ಮಸೀದಿ ಕೇಸ್ ಅಂತಿಮ ತೀರ್ಪನ್ನು ದೇಶದ ಬಹುತೇಕ ಜನ ಬಹುನಿರೀಕ್ಷೆಯಿ ಎದುರು ನೋಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಅಯೋಧ್ಯಾ ಪಟ್ಟಣದ ನಿವಾಸಿಗಳು ಮಾತ್ರ ನಿರಾಳವಾಗಿದ್ದಾರೆ.

ಅಲಹಾಬಾದ್ ನ ಹೈ ಕೋರ್ಟ್ ತೀರ್ಪು ಏನೇ ಆದರೂ ನಮ್ಮ ಕೋಮು ಸಾಮರಸ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಇಲ್ಲಿನ ನಿವಾಸಿಗಳು ಎದೆತಟ್ಟಿ ಹೇಳುತ್ತಾರೆ.

ಸರ್ಕಾರ ಹಾಗೂ ಪೊಲೀಸರು ತಲೆ ಕೆಡಿಸಿಕೊಂಡು ಸುರಕ್ಷತಾ ದೃಷ್ಟಿಯಿಂದ ಅಭೂತಪೂರ್ವ ಭದ್ರತಾ ವ್ಯವಸ್ಥೆ ಕಲ್ಪಿಸುತ್ತಿರುವುದನು ಕಾಣುತ್ತಿದ್ದೇವೆ. ಸೋಲು ಗೆಲುವು ಎರಡನ್ನು ಸಮಚಿತ್ತದಿಂದ ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಕೋರ್ಟಿನ ನಿರ್ಣಯದಿಂದ ಹಿಂದೂ ಮುಸ್ಲಿಂ ಐಕ್ಯತೆಗೆ ಭಂಗ ಬರುವುದಿಲ್ಲ ಎಂದು ಹಿಂದೂ ನಿವಾಸಿ ವಿಕಾಸ್ ಮಲ್ಹೋತ್ರ ಹೇಳಿದ್ದಾರೆ.

ವಿವಾದಿತ ಸ್ಥಳದಲ್ಲಿ ಮಸೀದಿ ಕಟ್ಟುತ್ತಾರೋ ಅಥವಾ ಮಂದಿರ ಕಟ್ಟುತ್ತಾರೋ ಜನರಿಗೆ ಶಾಂತಿ ಬೇಕಾಗಿದೆ. ಹಿಂದೂ ಸೋದರರು ಗೆದ್ದರೂ ಸರಿ, ಅಥವಾ ನಾವೇ ಗೆದ್ದರೂ ಸರಿ ನ್ಯಾಯಕ್ಕೆ ತಲೆ ಬಾಗುತ್ತೇವೆ ಎನ್ನುತ್ತಾರೆ ಕಾಸಿಫ್ ಶೇಖ್ ಚೌಧುರಿ.

ನ್ಯಾಯಾಲಯದ ಆದೇಶವನ್ನು ಪಾಲಿಸಬೇಕದ್ದು ನಮ್ಮ ಧರ್ಮ ಎಂದು ಶ್ಯಾಮ್ ಬಾಬು, ಮೊಹಮ್ಮದ್ ಸಿದ್ಧಿಕ್ಕಿ ಹೇಳುತ್ತಾರೆ. ಸೆ.17ಕ್ಕೆ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದಿತ ಕೇಸ್ ಗೆ ಅಲಹಾಬಾದ್ ಹೈ ಕೋರ್ಟ್ ಅಂತಿಮ ತೀರ್ಪು ನೀಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X