ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಕ್ ಬೆರ್ರಿ, ಕಿರಿಕಿರಿ ಕರೆಗಳ ಸುತ್ತಾ

By Mahesh
|
Google Oneindia Kannada News

Blackberry deadline Vodafone alerts subscribers
ನವದೆಹಲಿ, ಆ.30 : ಸರ್ಕಾರದ ತಪಾಸಣೆಗೆ ಅನುಮತಿ ನೀಡುವ ಕುರಿತು ರಿಸರ್ಚ್ ಇನ್ ಮೋಷನ್ ಹಾಗೂ ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿರುವಂತೆಯೇ ಸರ್ಕಾರ ಬ್ಲಾಕ್ ಬೆರ್ರಿಯ ಇ ಮೇಲ್ ಹಾಗೂ ಕಿರು ಸಂದೇಶಗಳನ್ನು ಆಗಸ್ಟ್ 31ರ ನಂತರ ನಿಷೇಧಿಸುವ ಸಾಧ್ಯತೆ ಕುರಿತು ವೊಡಾಫೋನ್ ತನ್ನ ಗ್ರಾಹಕರಿಗೆ ಮುನ್ಸೂಚನೆ ನೀಡಿದೆ.

ಇದರ ಜತೆಗೇ ತನ್ನ ಗ್ರಾಹಕರಿಗೆ ಸೂಕ್ತ ಅನುಕೂಲ ಕಲ್ಪಿಸಲು ಯತ್ನಿಸಲಾಗುತ್ತಿದೆ. ಅಲ್ಲದೆ ಈ ಕುರಿತ ಅಪ್ ಡೇಟ್ ನ್ನು ತನ್ನ ಗ್ರಾಹಕರಿಗೆ ತಲುಪಿಸಾಗುವುದು ಎಂದು ವೊಡಾಫೋನ್ ಹೇಳಿದೆ.
********

ಕಿರಿಕಿರಿ ಕರೆಗಳಿಗೆ ಸರ್ಕಾರ ಶೀಘ್ರ ಕಡಿವಾಣ: ಸಚಿವ

ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುವ ಅನಪೇಕ್ಷಿತ ಟೆಲಿ ಮಾರ್ಕೆಟಿಂಗ್ ಕರೆಗಳು ಹಾಗೂ ಕಿರು ಸಂದೇಶಗಳಿಗೆ ಸರ್ಕಾರ ಶೀಘ್ರವೇ ಕಡಿವಾಣ ಹಾಕಲಿದೆ ಎಂದು ದೂರಸಂಪರ್ಕ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಹೇಳಿದ್ದಾರೆ.

ಈ ಕುರಿತು ದೂರಸಂಪರ್ಕ ಇಲಾಖೆ ಹಾಗೂ ಟ್ರಾಯ್ ಅವಶ್ಯ ಚರ್ಚೆಗಳನ್ನು ಮಾಡಿದ್ದು ಈ ಕರೆಗಳನ್ನು ಶೀಘವೇ ನಿಷೇಧಿಸಲಾಗುವುದು ಎಂದು ಹೇಳಿದರು. ಈ ಟೆಲಿಮಾರ್ಕೆಟಿಂಗ್ ಕಂಪೆನಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರ ಸಂಪರ್ಕ ಸಚಿವ ಏ ರಾಜ ಅವರು ಇಲಾಖೆಗೆ ಸೂಚನೆ ನೀಡಿದ್ದರು.

ಈ ಹಿಂದೆ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ವಿರೋಧ ಪಕ್ಷಗಳ ಜತೆ ಸಭೆ ನಡೆಸುವಾಗ ಈ ರೀತೀಯ ಕರೆ ಬಂದಿದ್ದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿತ್ತು. ಟ್ರಾಯ್ ಕಳೆದ ಮೇ ತಿಂಗಳಿನಲ್ಲೇ ಈ ಕರೆಗಳಿಗೆ ಕಡಿವಾಣ ಹಾಕುವ ಸಂಬಂಧ ಆದೇಶವನ್ನು ಸಿದ್ಧಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X