ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ವಿಳಾಸ ಹುಡುಕಿ ಕೊಡುವ ಮ್ಯಾಪ್ ಮೈ ಇಂಡಿಯಾ

By Mahesh
|
Google Oneindia Kannada News

MapmyIndia Launches Its V5 Maps With Voice Guidance
ಮುಂಬೈ, ಆ.29: ಮ್ಯಾಪ್ ಮೈ ಇಂಡಿಯಾ ಐದನೇ ಆವೃತ್ತಿಯ ಭೂಪಟಗಳನ್ನು ಅನಾವರಣಗೊಳಿಸಿದ್ದು, ದೆಹಲಿ ಎನ್ ಸಿಆರ್ ಪ್ರದೇಶ ಹಾಗೂ ಚಂಡೀಗಢದಲ್ಲಿ ಮನೆ ವಿಳಾಸ ಹುಡುಕಲು ಸಹಾಯಕವಾಗುವಂತೆ ರೂಪಿಸಲಾಗಿದೆ.

ನಕ್ಷೆಯನ್ನು ಒಮ್ಮೆ ಹಾಗೆ ಹರಡಿದರೆ ಒಂದು ಪ್ರದೇಶ ಸುಮಾರು 52 ವಿಭಾಗಗಳು ಎದ್ದು ಕಾಣಲಿದೆ. ಅಂದರೆ, ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಲು ಸಹಾಯಕವಾಗಿದೆ. ಕಚೇರಿಗಳು, ರೆಸ್ಟೋರೆಂಟ್ ಗಳು, ಕ್ಲಬ್ ಗಳು, ಅಪಾರ್ಟ್ಮೆಂಟ್ ಗಳು, ಮನೆಗಳು, ಹೋಟೆಲ್ ಗಳು, ಪೆಟ್ರೋಲ್ ಬಂಕ್ ಗಳು, ಎಟಿಎಂಗಳು ಇತ್ಯಾದಿ ಸ್ಥಳಗಳ ಮಾರ್ಗಸೂಚಿಯನ್ನು ಮ್ಯಾಪ್ ಮೈ ಇಂಡಿಯಾ ನೀಡಲಿದೆ.

ಭಾರತದ ಸುಮಾರು 809 ನಗರ ಪ್ರದೇಶ 76,000 ಪಟ್ಟಣಗಳು ಹಾಗೂ ಹಳ್ಳಿಗಳನ್ನು ಮ್ಯಾಪ್ ಮೈ ಇಂಡಿಯಾ ಆವರಿಸಿದೆ. ಸ್ಥಳೀಯ ವ್ಯಾಪಾರಿ ಕೇಂದ್ರಗಳನ್ನು ನಕಾಶೆಯಲ್ಲಿ ಗುರುತಿಸಬಹುದಾಗಿದೆ.

ಹೊಸ ಆವೃತ್ತಿಯಲ್ಲಿ ನಿಮಗೆ ಬೇಕಾದ ಮಾಹಿತಿ ಅಂದರೆ, ಊರಿನ ಪ್ರಮುಖ ಹೋಟೆಲ್, ಎಟಿಎಂ ಹುಡುಕಬೇಕಿದ್ದರೆ, ಸರ್ಚ್ ಬಾಕ್ಸ್ ನಲ್ಲಿ ಕೀ ಪದ ವನ್ನು ಹಾಕಿದರೆ ಸಾಕು, ಕೀ ಪದ ತಪ್ಪಿದ್ದರೆ ತಾನೇ ಸರಿಪಡಿಸಿಕೊಳ್ಳುತ್ತದೆ ಅಥವಾ ನಿಮಗೆ ಸರಿಪದಯಾವುದೆಂದು ಸಲಹೆ ನೀಡುತ್ತದೆ.

ಧ್ವನಿ ಆಧಾರಿತ ಮಾರ್ಗದರ್ಶನ ನೀಡುತ್ತಿದೆ. ಅದರಲ್ಲೂ ಕನ್ನಡ ಸೇರಿದಂತೆ ಬೆಂಗಾಳಿ, ಗುಜರಾತಿ , ಹಿಂದಿ, ಮಲೆಯಾಳಂ, ಪಂಜಾಬಿ, ತಮಿಳು ಹಾಗೂ ತೆಲುಗು ಇತ್ಯಾದಿ ಎಂಟು ಭಾಷೆಗಳಲ್ಲಿ ಈ ಸೌಲಭ್ಯ ಸಿಗುತ್ತದೆ.

ಮ್ಯಾಪ್ ಮೈ ಇಂಡಿಯಾದ ನಕಾಶೆಗಳು ವೆಬ್ ಸೈಟ್ ಅಲ್ಲದೆ ಮೊಬೈಲ್ ನಲ್ಲೂ ಲಭ್ಯ. ಇದೀಗ ಐಷಾರಾಮಿ ಕಾರುಗಳಲ್ಲಿ ಖಾಯಂ ಆಗುತ್ತಿದೆ. ಮ್ಯಾಪ್ ಮೈ ಇಂಡಿಯಾದ ಜಿಪಿಎಸ್ ನ್ಯಾವಿಗೇಷನ್ ಸಾಧಕಗಳು, ನ್ಯಾವಿಗೇಟರ್ ಗಳು ಪ್ರಮುಖ ಆಟೋ ಮಳಿಗೆಗಳಲ್ಲಿ ಲಭ್ಯವಿದೆ.

ಟೊಯೋಟಾ, ಜನರಲ್ ಮೋಟಾರ್ಸ್, ಫೋರ್ಡ್ ,ಮಹೀಂದ್ರಾ, ಫಿಯೆಟ್, ಮಾರುತಿ ಹಾಗೂ ಟಾಟಾ ಮೋಟಾರ್ಸ್ ವಾಹನಗಳಲ್ಲಿ ಈಗಾಗಲೇ ಮ್ಯಾಪ್ ಮೈ ಇಂಡಿಯಾದ ಪರಿಕರಗಳು ಬಳಕೆ ಯಾಗುತ್ತಿದೆ. ಕ್ರೋಮಾ, ಜಂಬೋ, ಲ್ಯಾಂಡ್ ಮಾರ್ಕ್, ಗಿಜ್ಮೋಸ್ ಮುಂತಾದ ಎಲೆಕ್ಟ್ರಾನಿಕ್ ರಿಟೈಲ್ ಮಳಿಗೆಗಳಲ್ಲೂ ಈ ಸಾಧಕಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X