ಸೂಪ್ ನಲ್ಲಿ ಕೆನೆ ಬದಲು ಕಾಂಡೋಮ್

ಜಡ್ ಫಿಲಿಫ್ ಹೊಡೌಸೆಕ್ ಎಂಬ 51 ವರ್ಷದ ವ್ಯಕ್ತಿ ತನ್ನ ಸಂಸಾರ ಸಮೇತ ಕ್ಲೇಮ್ ಜಂಪರ್ ರೆಸ್ಟೋರೆಂಟ್ ಗೆ ಬಂದು ಫ್ರೆಂಚ್ ಆನಿಯನ್ ಸೂಪ್ ಗೆ ಆರ್ಡರ್ ಮಾಡಿದರು. ಆದರೆ, ಟೇಬಲ್ ಮೇಲೆ ಬಂದ ಸೂಪ್ ನಲ್ಲಿ ಕೆನೆಯ ಬದಲಿಗೆ ಕಾಂಡೋಮ್ ತೇಲುತ್ತಿತ್ತು.
ರೆಸ್ಟೋರೆಂಟ್ ವಿರುದ್ಧ ಸಿಟ್ಟಿಗೆದ್ದ ಫಿಲಿಫ್ ಕೇಸು ದಾಖಲಿಸಿದ್ದು, ಆತನ ಕೋಪ ತಣ್ಣಗಾಗಿಸಲು ಸುಮಾರು $30,000 ದಂಡ ನೀಡಲು ರೆಸ್ಟೋರೆಂಟ್ ಮುಂದಾಗಿತ್ತು. ಆದರೆ. ಫಿಲಿಫ್ ಪರ ವಕೀಲ ಇದಕ್ಕೆ ಒಪ್ಪಿಲ್ಲ. ರೆಸ್ಟೋರೆಂಟ್ ಹೆಸರು ಕೆಡಿಸಲು ಬೇಕೆಂತಲೇ ಕಾಂಡೋಮ್ ಅನ್ನು ಫಿಲಿಫ್ ಹಾಕಿರಬಹುದು ಎಂದು ರೆಸ್ಟೋರೆಂಟ್ ಪರ ವಕೀಲರು ವಾದಿಸತೊಡಗಿದರು.
ಕಡೆಗೆ ಕಾಂಡೋಮ್ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಡಿಎನ್ ಎ ಪರೀಕ್ಷೆ ಕೂಡಾ ನಡೆದು, ಫಿಲಿಫ್ ಆಗಲಿ ಆತನ ಪತ್ನಿ ಬಳಸಿದ ಕಾಂಡೋಮ್ ಆಗಲಿ ಅಲ್ಲ ಎಂದು ದೃಢಪಟ್ಟಿದೆ.
ಈಗ ಫಿಲಿಫ್ ಗೆ ಬೆಣ್ಣೆ ಸವರಲು ಮುಂದಾಗಿರುವ ರೆಸ್ಟೋರೆಂಟ್ ಪರಸ್ಪರ ಒಪ್ಪಂದ ಮಾಡಿಕೊಂಡು ಕೇಸ್ ಗೆ ಮುಕ್ತಾಯ ಹಾಡಿದೆ. ಕೆನೆ ಬದಲಿ ಕಾಂಡೋಮ್ ಹಾಕಿದ ತಪ್ಪಿಗೆ ಭಾರಿ ದಂಡವನ್ನು ರೆಸ್ಟೋರೆಂಟ್ ತೆತ್ತಿದೆ.












Click it and Unblock the Notifications