ಯುಎಸ್ ಚರ್ಚ್ ನಲ್ಲಿ ದಿನಕ್ಕೊಂದು ಸೆಕ್ಸ್ ಹಗರಣ

ಪ್ರಮುಖ ಪಾದ್ರಿಯಾಗಿರುವ ಸ್ಟೀಫನ್ ಕೀಸ್ಲ್ ಕಳೆದ ಮೂರು ದಶಕಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದುದಾಗಿ ಆರು ಮಂದಿ ಮಹಿಳೆಯರು ಮತ್ತು ಒಬ್ಬ ಪುರುಷ ವ್ಯಕ್ತಿಗಳು ಆಕ್‌ಲ್ಯಾಂಡಿನ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
1972-2001ರ ನಡುವಣ ಈ ಕರಾಳ ಘಟನೆಗಳ ಬಗ್ಗೆ ಚರ್ಚ್‌ನ ವರಿಷ್ಠರಿಗೆಲ್ಲ ತಿಳಿದಿದ್ದರೂ ಅಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುವ ಬದಲಿಗೆ ಮುಚ್ಚಿ ಹಾಕಲು ಯತ್ನಿಸಿದರು ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಚರ್ಚ್ ನಲ್ಲಿ ಲೈಂಗಿಕ ಕಿರುಕಳ ಇತಿಹಾಸ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಪಾದ್ರಿಗಳಿಗೆ ಆಶ್ರಯ ನೀಡುವಲ್ಲಿ ಅಮೆರಿಕದ ಕ್ಯಾಥೋಲಿಕ್ ಚರ್ಚ್‌ಗಳಿಗೆ ದೀರ್ಘ ಇತಿಹಾಸವೇ ಇದೆ. ಇಲ್ಲಿ ಮಕ್ಕಳ ಮೇಲೆ ಇಂತಹ ದೌರ್ಜನ್ಯ ಎಸಗುವ ಪಾದ್ರಿಗಳಿಗೆ ರಕ್ಷಣೆ ಒದಗಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿರುವುದನ್ನು ಎಎಫ್‌ಬಿ ವರದಿ ಮಾಡಿದೆ.
ಸ್ಟೀಫನ್ ತಮ್ಮ ಮೇಲೆ ಚಿಕ್ಕಂದಿನಿಂದಲೂ ಲೈಂಗಿಕ ದೌರ್ಜನ್ಯವೆಸಗುತ್ತಲೇ ಬಂದಿದ್ದಾನೆ. ತನ್ನ ಮೇಲಂತೂ ಇತ್ತೀಚಿನ ವರೆಗೂ ಇಂತಹ ದೌರ್ಜನ್ಯ ಆತನಿಂದ ನಡೆಯುತ್ತಲೇ ಇತ್ತು ಎಂಬುದಾಗಿ ತೆರೆಸಾ ರೋಸ್ಸನ್ ಎಂಬಾಕೆ ಹೇಳಿದ್ದಾರೆ.
ಪಾದ್ರಿಗಳ ಲೈಂಗಿಕ ದೌರ್ಜನ್ಯ ಕೃತ್ಯಗಳಿಂದ ವ್ಯಾಟಿಕನ್ ಹಾಗೂ ಪೋಪ್ ತೀವ್ರ ಮುಜುಗರಕ್ಕೀಡಾಗಿದೆ. ಹಲವು ಬಿಷಷ್ ರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳಿದ್ದು, ಮ್ಯೂನಿಚ್‌ನ ಅತ್ಯಾಚಾರಿ ಬಿಷಪ್ ಒಬ್ಬನಿಗೆ ಆಶ್ರಯ ನೀಡಿದ್ದಾಗಿ ಸ್ವತ:ಪೋಪ್ ಐದನೇ ಬೆನಡಿಕ್ಟ್ ಅವರ ವಿರುದ್ಧವೇ ಆರೋಪ ವ್ಯಕ್ತವಾಗಿತ್ತು












Click it and Unblock the Notifications