ಬಡಮಕ್ಕಳ ಹೊಟ್ಟೆ ತುಂಬಿಸಲು ಈ ನಾಟಕ ನೋಡಿ

Join hands to serve society
ಬೆಂಗಳೂರು, ಆ. 19 : ಬಡ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಉದಾತ್ತ ಉದ್ದೇಶದಿಂದ 'ಅವಿರತ' ಮತ್ತು ಸಾಂಸ್ಕೃತಿಕ ಸಮಾಜ ಸೇವಾ ಟ್ರಸ್ಟ್ 'ಕಲಾವೇದಿಕೆ' ಜಂಟಿಯಾಗಿ ಮಂಡ್ಯ ರಮೇಶ್ ನಿರ್ದೇಶನದ ಹಾಸ್ಯ ನಾಟಕ 'ಚೋರ ಚರಣ ದಾಸ' ಪ್ರದರ್ಶನವನ್ನು ಆಗಸ್ಟ್ 21 ಮತ್ತು 22ರಂದು ಏರ್ಪಡಿಸಿದೆ.

ಹಬೀಬ್ ತನ್ವೀರ್ ರಚಿಸಿದ, ಮೈಸೂರಿನ ನಟನ ತಂಡ ಪ್ರದರ್ಶಿಸುತ್ತಿರುವ ನಾಟಕ 21ರಂದು ಸಂಜೆ 7ಕ್ಕೆ ಮತ್ತು 22ರಂದು ಮಧ್ಯಾಹ್ನ 3.30 ಮತ್ತು ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಹನುಮಂತ ನಗರದ ರಾಮಾಂಜನೇಯ ಗುಡ್ಡದ ಬಳಿಯ ಕೆಎಚ್ ಕಲಾಸೌಧದಲ್ಲಿ ಪ್ರದರ್ಶಿತಗೊಳ್ಳುತ್ತಿದೆ. ಪ್ರವೇಶ ದರ 100 ರು. ಇದ್ದು, ಇದರಲ್ಲಿನ 50 ರು. ಅವಶ್ಯಕತೆ ಇರುವ ಒಬ್ಬ ಬಡ ವ್ಯಕ್ತಿಯ ಒಂದು ಹೊತ್ತಿನ ಊಟಕ್ಕೆ ವಿನಿಯೋಗಿಸಲಾಗುವುದು ಎಂದು ಅವಿರತ ಹೇಳಿದೆ.

ಪ್ರತಿತಿಂಗಳು ಒಂದು ಅನಾಥಾಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿಯ ಮಕ್ಕಳಿಗೆ ಆ ದಿನದ ಊಟದ ವ್ಯವಸ್ಥೆ ಮಾಡುವ ಯೋಜನೆಯನ್ನು ಅವಿರತ ಮತ್ತು ಕಲಾವೇದಿಕೆ ಹಮ್ಮಿಕೊಂಡಿವೆ. ಎಷ್ಟೋ ಜನರಿಗೆ ಅನಾಥಾಶ್ರಮದ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಆಸೆ ಇರುತ್ತೆ, ಆದರೆ ಒಬ್ಬರೆ ಮಾಡಲು ಕಷ್ಟ ಅನಿಸುವ ಕಾರಣ ಸುಮ್ಮನಾಗಿರುತ್ತಾರೆ. ಆದ ಕಾರಣ ನಾವೆಲ್ಲರು ಸೇರಿ ಒಟ್ಟಿಗೆ ಮಾಡಿದರೆ ಎಲ್ಲರು ಕೈ ಜೋಡಿಸಿದರೆ ನಾಲ್ಕಾರು ಬಡಮಕ್ಕಳ ಹೊಟ್ಟೆ ತುಂಬಿಸಿದಂತಾಗುತ್ತದೆ ಎಂಬುದು ಅವಿರತದ ಆಶಯ.

ಇದಕ್ಕಾಗಿ 50 ರು.ಗಳ ಕೂಪನ್ ಸಹ ಮಾಡಿದ್ದೇವೆ. ಆಸಕ್ತರು ಕೂಪನ್ ತೆಗೆದುಕೊಳ್ಳಬಹುದು. ಹನಿ ಹನಿಗೂಡಿದರೆ ಹಳ್ಳ ಅಲ್ಲವೆ? ದಯವಿಟ್ಟು ನಾಟಕಕ್ಕೆ ಬಂದು ಮನರಂಜನೆ ಪಡೆದು ಅನಾಥಮಕ್ಕಳಿಗೆ ಸಹಾಯ ಮಾಡಿ ಎಂದು ಅವಿರತ ಟ್ರಸ್ಟ್ ಕೇಳಿಕೊಂಡಿದೆ.

ಮತ್ತೆ ಗಮನಿಸಿ

ನಾಟಕ : ಚೋರ ಚರಣ ದಾಸ
ದಿನಾಂಕ : ಆಗಸ್ಟ್ 21 ಮತ್ತು 22
ಸ್ಥಳ : ಕೆಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತ ನಗರ, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+