ರಕ್ಷಣಾ ರಂಗ ಪ್ರವೇಶಿಸಲು ವಿಪ್ರೋಗೆ ಅನುಮತಿ

ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ ವಿಪ್ರೋ ರಕ್ಷಣ ರಂಗದ ಸಾಫ್ಟ್ ವೇರ್ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮಾಡಲು ಅನುಮತಿ ನೀಡಿದ್ದು ಇದನ್ನು ಹಣಕಾಸು ಸಚಿವಾಯದ ಅನುಮೋದನೆಗಾಗಿ ಸಲ್ಲಿಸಿದೆ.
ಈ ಬೆಳವಣಿಗೆ ಮಹತ್ತ್ವದ್ದಾಗಿದ್ದು ಖಾಸಗೀ ಕಂಪೆನಿಗಳು ರಕ್ಷಣಾ ರಂಗ ಪ್ರವೇಶಿಸಲು ಅನುಮೋದನೆ ನೀಡುವ ಕುರಿತು ಅಸ್ಪಷ್ಟತೆ ಇತ್ತು. ಇದಕ್ಕಾಗಿ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ, ಮತ್ತು ರಕ್ಷಣಾ ಇಲಾಖೆಗೆ ಸ್ಪಷ್ಟನೆ ಕೋರಲಾಗಿತ್ತು.
ಅಲ್ಲದೆ ಈ ಪ್ರಸ್ತಾವನೆ ರಕ್ಷಣಾ ಉದ್ಯಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿ ಶೇ 26ಕ್ಕೂ ಅನ್ವಯಿಸುತಿತ್ತು. ಏಕೆಂದರೆ ವಿಪ್ರೋದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ ಶೇ 9.8 ಇರುವುದರಿಂದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಅನುಮತಿ ಪಡೆಯುವಂತೆ ಸೂಚಿಸಲಾಗಿತ್ತು.
ಆದರೆ ಪ್ರತ್ಯೇಕ ನಿಯಮಾವಳಿಗಳ ಪ್ರಕಾರ ಈ ಕಂಪೆನಿಗಳಿಗೆ ವಿದೇಶಿ ಹೂಡಿಕೆ ಶೇ.26 ಕ್ಕಿಂತ ಜಾಸ್ತಿ ಇರಬಾರದು. ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ರಕ್ಷಣಾ ಇಲಾಖೆ ವಿಪ್ರೋ ರಕ್ಷಣಾ ಉದ್ಯಮ ಪ್ರವೇಶಿಸಲು ಒಪ್ಪಿಗೆ ನೀಡಿವೆ.












Click it and Unblock the Notifications