ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಸುವರ್ಣ ಸಮಿತಿಗೆ ಕಾರ್ನಾಡ ರಾಜೀನಾಮೆ

By Mrutyunjaya Kalmat
|
Google Oneindia Kannada News

Girish Karnad
ಪಣಜಿ, ಆ. 17 : ಕಲಾವಿದ ಜೋಸ್ ಪೇರೇರಾ ಅವರ ಕಲಾಕೃತಿಗಳ ಪ್ರದರ್ಶನದ ಮೇಲೆ ಹಿಂದೂ ಕೋಮುವಾದಿಗಳ ಗಂಪೊಂದು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಗೋವಾ ಸರಕಾರ ಮೌನ ವಹಿಸಿರುವುದನ್ನು ಖಂಡಿಸಿ ಗೋವಾ ಸುವರ್ಣ ಮಹೋತ್ಸವ ಅಭಿವೃದ್ಧಿ ಸಮಿತಿಗೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ ರಾಜೀನಾಮೆ ನೀಡಿದ್ದಾರೆ.

ಕಳೆದ ತಿಂಗಳು ನಗರದ ಝೇವಿಯರ್ ಸೆಂಟರ್ ನಲ್ಲಿ ಕಲಾವಿದ ಜೋಸ್ ಪೇರೇರಾ ಅವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿವ ಮತ್ತು ಕೃಷ್ಣನಿಗೆ ಅವಮಾನ ಮಾಡುವಂತ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಪ್ರದರ್ಶನ ಕೇಂದ್ರಕ್ಕೆ ದಾಳಿ ನಡೆಸಿದ್ದರು. ಜೊತೆಗೆ ಪ್ರದರ್ಶನವನ್ನು ಸ್ಥಗಿತಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಈ ಘಟನೆ ಕುರಿತು ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರಿಗೆ ಪತ್ರ ಬರೆದಿರುವ ಗಿರೀಶ್ ಕಾರ್ನಾಡ, ಜೋಸ್ ಪೇರೇರಾ ಕಲಾಕೃತಿಗಳ ಪ್ರದರ್ಶನ ಕೇಂದ್ರಕ್ಕೆ ಹಿಂದೂ ಸಂಘಟನೆಗಳು ದಾಳಿ ನಡೆಸಿ, ಪ್ರದರ್ಶನ ಸ್ಥಗಿತಗೊಳಿಸಿರುವುದು ಖಂಡನೀಯ. ಕಲಾಕೃತಿ ಪ್ರದರ್ಶನ ಕೇಂದ್ರಕ್ಕೆ ಸರಕಾರ ಸೂಕ್ತ ಭದ್ರತೆ ಒದಗಿಸಬೇಕಿತ್ತು. ಆದರೆ, ಈ ವಿಷಯದಲ್ಲಿ ಸರಕಾರ ಮೌನ ವಹಿಸಿರುವುದರಿಂದ ತೀವ್ರ ಬೇಸರವಾಗಿದೆ. ಹೀಗಾಗಿ ಗೋವಾ ಸುವರ್ಣ ಮಹೋತ್ಸವ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾರ್ನಾಡ ಪತ್ರದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X