ಕುಡುಕನ ಗುದದ ಮೇಲೆ ಸ್ವಸ್ತಿಕ್ ಕೆತ್ತಿದ ಬಾಲೆ
ಆಕ್ಲೆಂಡ್,
ಆ.13: ಕುಡುಕ ಯುವಕನೊಬ್ಬನ ಗುದದ ಮೇಲೆ ಸ್ಕ್ರೂ ಡೈವರ್ ಬಳಸಿ ಸ್ವಸ್ತಿಕ್ ಚಿಹ್ನೆಯನ್ನು ಕೆತ್ತಿದ ಯುವತಿಗೆ ಸ್ಥಳೀಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. id="toptextpromo">ಕ್ರೈಸ್ಟ್
ಚರ್ಚ್ ನಲ್ಲಿ ಆಗಸ್ಟ್ 2009ರಲ್ಲಿ ಮೇಲ್ಕಂಡ ಘಟನೆ ನಡೆದಿತ್ತು. ಬ್ರಿಯಾನಾ ರೋಸ್ ಮರ್ರೆ ಎಂಬ 21 ವರ್ಷದ ಯುವತಿಗೆ 16 ತಿಂಗಳ ಕಾರಾಗೃಹವಾಸ ವಿಧಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು, ದೈಹಿಕ ಹಲ್ಲೆ ಮಾಡಿದ ಬ್ರಿಯಾನಾ ಶಿಕ್ಷಾರ್ಹಳು ಎಂದು ಕೋರ್ಟ್ ಘೋಷಿಸಿದೆ. id='are-slot-1' class='oiad oi-axt oiadv'> id='top-searched-articles'> 23 ವರ್ಷದ ಯುವಕಯೊಬ್ಬ ಬಾರೊಂದರಲ್ಲಿ ಕುಡಿಯುತ್ತಾ ಕುಳಿತ್ತಿದ್ದ ಕ್ರೈಸ್ಟ್ ಚರ್ಚ್ ಸ್ಕಿನ್ ಹೆಡ್ ಸಮುದಾಯದ ಬ್ರಿಯಾನಾ ಹಾಗೂ ಇನ್ನಿಬ್ಬರ ಬಳಿ ಬಂದು ಆಕೆಯನ್ನು ಕೆರಳಿಸಿದ್ದಾನೆ. ಆಗ ಸಿಟ್ಟಿಗೆದ್ದ ಬ್ರಿಯಾನಾ ಆತನನ್ನು ನೆಲಕ್ಕೆ ತಬ್ಬಿದ್ದಾಳೆ. ಇನ್ನಿಬ್ಬರು ಆಕೆಯ ಸಹಾಯಕ್ಕೆ ಬಂದು ಯುವಕನ ತಲೆಯನ್ನು ಸುಮಾರು 20 ಬಾರಿ ನೆಲಕ್ಕಪ್ಪಳಿಸಿದ್ದಾರೆ. ಪ್ರಜ್ಞೆತಪ್ಪಿದ ಯುವಕನ ಪ್ಯಾಂಟ್ ಬಿಚ್ಚಿ, ಗುದದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಕೆತ್ತಿದ್ದಳು ಎಂದು ಹೆರಾಲ್ಡ್ ಸನ್ ವರದಿ ಮಾಡಿದೆ.











Click it and Unblock the Notifications