ಇನ್ಫೋಸಿಸ್ ಟೆಕ್ಕಿ ಪತ್ನಿಯ ಬರ್ಬರ ಕೊಲೆ
ಬೆಂಗಳೂರು,
ಆ. 10 : ಪೇಪರ್ ಹಾಕುವ ನೆಪದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇನ್ಫೋಸಿಸ್ ಟೆಕ್ಕಿಯೊಬ್ಬರ ಪತ್ನಿಯ ಕತ್ತು ಸೀಳಿ ಕೊಲೆಗೈದು ನಗದು ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. id="toptextpromo">ಇನ್ಫೋಸಿಸ್
ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸತೀಶ್ ಗುಪ್ತಾ ಅವರ ಪತ್ನಿ ಪ್ರಿಯಾ ಗುಪ್ತಾ ಮೃತಪಟ್ಟಿರುವ ದುರ್ದೈವಿ. ಇಂದು ಬೆಳಗ್ಗೆ ಟೆಕ್ಕಿ ಸತೀಶ್ ವಾಕಿಂಗ್ ಗೆ ತೆರಳಿದ್ದರು. ಪೇಪರ್ ಹಾಕುವ ನೆಪದಲ್ಲಿ ಇಬ್ಬರು ದುಷ್ಕರ್ಮಿಗಳು ಮನೆಗೆ ಬಂದಿದ್ದಾರೆ. ಆದರೆ, ಪ್ರಿಯಾ ಗುಪ್ತಾ ತಕ್ಷಣ ಪತಿ ಸತೀಶ್ ಅವರಿಗೆ ಕರೆ ಮಾಡಿ ಪೇಪರ್ ಹಾಕಿಸಿಕೊಳ್ಳುವ ಬಗ್ಗೆ ವಿಚಾರಣೆ ಮಾಡಿದ್ದಾರೆ. ಪೇಪರ್ ಹಾಕಲು ನಾನು ಯಾರಿಗೂ ಹೇಳಿಲ್ಲ. ನಾನು ಬರುವವರೆಗೂ ಮನೆಯ ಬಾಗಿಲು ತೆರೆಯಬೇಡ ಎಂದು ಸತೀಶ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಾಕಿಂಗ್
ತೆರಳಿದ್ದ ಸತೀಶ್ ಮನೆಗೆ ಬಂದಾಗ ಪತ್ನಿ ಪ್ರಿಯಾ ಅವರನ್ನು ಕೊಲೆಗೈಯಲಾಗಿತ್ತು. ದುರ್ಷರ್ಮಿಗಳು ಪ್ರಿಯಾ ಅವರ ಕೈಕಾಲು ಕಟ್ಟಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಾಗೂ ಮನೆಯಲ್ಲಿ 2 ಲಕ್ಷ ರುಪಾಯಿ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಿಯಾ ಗುಪ್ರಾ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.











Click it and Unblock the Notifications