ಅಕ್ರಮ-ಸಕ್ರಮ ವಿಧೇಯಕ ಅಂದ್ರೇನು ?

ನಗರದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಗ್ರೀನ್ ಬಿಲ್ಡಿಂಗ್ ದಿ ವೇ ಫಾರ್ವರ್ಡ್ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಕ್ರಮ ಸಕ್ರಮ ಎಂದರೆ ಏನು ಎಂದು ಇದುವರೆಗೂ ಗೊತ್ತಿದ್ದಿಲ್ಲ. ನಾನು ಈ ಹಿಂದೆ ಕೇಂದ್ರ ಸಚಿವನಾಗಿದ್ದಾಗ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭಕ್ಕೆ ಹೋಲಿಸಿದರೆ ಈಗ ಸಾಕಷ್ಟು ಬದಲಾಗಿದೆ.
ಇಂದು ವಾಹನಗಳ ಪಾರ್ಕಿಂಗ್ ಗೆ ಜಾಗವಿಲ್ಲ. ಕಾವೇರಿ ಎಂಫೋರಿಯಂ, ಮಣಿಪಾಲ ಆಸ್ಪತ್ರೆಗೆ ಹೋದಾಗ ಅಲ್ಲಿ ವಾಹನ ನಿಲ್ಲಿಸಲು ಸ್ಥಳವೇ ಇರಲಿಲ್ಲ. ಎಲ್ಲಾ ಸರಕಾರಗಳು ಮುಂದೆ ಚಲಿಸುತ್ತಿದ್ದರೆ, ರಾಜ್ಯ ಸರಕಾರ ಮಾತ್ರ ಹಿಂದಕ್ಕೆ ಸಾಗತೊಡಗಿದೆ ಎಂದು ಅವರು ಟೀಕಿಸಿದರು.
ಬೆಂಗಳೂರಿನ ಕಾರ್ಪೋರೇಟ್ ವಲಯ ಅದ್ಭುತವಾಗಿ ಬೆಳೆದಿದೆ. ಇದೇ ಕಾರಣಕ್ಕೆ ರಿಯಲ್ ಎಸ್ಟೇಟ್ ಉದ್ಯಮ ಕೂಡ ಸಾಕಷ್ಟು ಬೆಳವಣಿಗೆ ಕಂಡಿದೆ. ಸಾರ್ವಜನಿಕರ, ಖಾಸಗಿ ಅಥವಾ ಸರಕಾರಿ ಸ್ವತ್ತುಗಳನ್ನು ಕಬಳಿಸದೆ, ಎಲ್ಲಿಯೂ ಒತ್ತುವರಿ ಮಾಡಿಕೊಳ್ಳದೆ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದರು.












Click it and Unblock the Notifications