ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಚಾಲಕರ ಹನ್ನೆರಡು ಮಹಾಪಾಪಗಳು

By Shami
|
Google Oneindia Kannada News

Say NO to auto on August 12
ಬೆಂಗಳೂರಿನ ಆಟೋ ರಿಕ್ಷಾ ಚಾಲಕರು ಪ್ರಯಾಣಿಕರಿಗೆ ಕೊಡುವ ಕಷ್ಟ ಕಾರ್ಪಣ್ಯ ಒಂದಲ್ಲ, ಹನ್ನೆರಡು. ಅಂದಾಜು ಶೇ. 10ರಷ್ಟು ಉತ್ತಮ ನಡವಳಿಕೆಯ, ಪ್ರಾಮಾಣಿಕ ಚಾಲಕರನ್ನು ಬಿಟ್ಟರೆ ಉಳಿದ ಶೇ. 90ರಷ್ಟು ಚಾಲಕರು ಎಸಗುವ ಡಜನ್ ಮಹಾ ಪಾಪಗಳು ಈ ಕೆಳಕಂಡಂತಿವೆ:

* ನೀವು ಕರೆದ ಕಡೆಗೆ ಅವರಪ್ಪನ ಆಣೆ ಬರುವುದಿಲ್ಲ.
* ಮೀಟರ್ ಸಖತ್ ಮೋಸ. ಮಿನಿಮಮ್ ಜಂಪ್ 25%.
* ಹಗಲಿನ ವೇಳೆನೇ ಒಂದೂವರೆ ಅಥವಾ ಡಬ್ಬಲ್ ಮೀಟರ್.
* ರಾತ್ರಿ ವೇಳೆ ಅಥವಾ ಬಂದ್ ಇದ್ದಾಗ ಅವರು ಕೇಳಿದಷ್ಟು ಪೀಕಬೇಕು.
* ಮಳೆ ಬರುತ್ತಿದ್ದರಂತೂ ಅವರದು ರಾವಣನ ಅಟ್ಟಹಾಸ.
* ಅವರ ಬಳಿ ಯಾವತ್ತೂ ಚಿಲ್ಲರೆ ಇರುವುದೇ ಇಲ್ಲ, ಪಾಪ.
* ನಿಮ್ಮಂಥವರನ್ನು ಬೇಜಾನ್ ನೋಡಿದೀನಿ ಎಂದು ಪ್ರಯಾಣಿಕರಿಗೆ ಆಗಾಗ 'ಆಶೀರ್ವಾದ'.
* ಪ್ರಶ್ನೆ ಕೇಳಿದರೆ ನಿಮ್ಮನ್ನು ಗುರಾಯಿಸಿ ನೋಡುವುದು.
* ಊರು ಗೊತ್ತಿಲ್ಲದಿದ್ದರಂತೂ ಸುಮ್ಮನೆ ಆಟೋ ಮೀಟರ್ ಸುತ್ತಾಡಿಸುವುದು.
* ಮಳೆ ನೀರಿನಿಂದ ರಕ್ಷಣೆಗೆ ಸೈಡ್ ಕವರ್ ಕಟ್ಟುವುದಿಲ್ಲ.
* ಗಾಡಿ ಓಡಿಸುವಾಗ ಒಂದೇ ಸಮನೆ ಫೋನಿನಲ್ಲಿ ಮಾತನಾಡುವುದು.
* ಪರವಾನಗಿ, ಪರ್ಮಿಟ್ ಮನೆಯಲ್ಲಿ ಇವರು ರಸ್ತೆಯಲ್ಲಿ.

ಬೆಂಗಳೂರು ಆಟೋ ಚಾಲಕರ ಈ ದುರಾಚಾರಗಳನ್ನು ಸಹಿಸಿಕೊಳ್ಳಲು ಸಿದ್ಧರಿಲ್ಲದ ಮತ್ತು ರೋಸಿಹೋದ ಪ್ರಯಾಣಿಕರು ಈಗ ಚಾಲಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸುಲಿಗೆಕೋರ ಆಟೋಗಳ ವಿರುದ್ಧ 'ಆಟೋ ಬಹಿಷ್ಕಾರ" ಆಂದೋಲನವೊಂದನ್ನು ಆನ್‌ಲೈನ್ ನಲ್ಲಿ ಹುಟ್ಟು ಹಾಕಿದ್ದಾರೆ. ವೆಬ್ ಸೈಟಿನ ಹೆಸರು ಮೀಟರ್‌ಜಾಮ್ ಡಾಟ್ ಕಾಂ.

ಆಗಸ್ಟ್ 12ರ ಗುರುವಾರ ಮೀಟರ್ ಜಾಮ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ದುರ್ವರ್ತನೆ ಮಾಡುವ ಆಟೋ ಮತ್ತು ಟ್ಯಾಕ್ಸಿಗಳಿಗೆ 'ಹೋಗಯ್ಯ" ಎಂದು ಹೇಳಬೇಕು ಎಂದು ಜನತೆಯ ಗುಂಪು ಪಣತೊಟ್ಟಿದೆ. ಆಂದೋಲನ ನಡೆಸುತ್ತಿರುವವರು ಆಟೋ ಬಳಕೆದಾರರಾಗಿರುವುದರಿಂದ ಸ್ವಯಂಪ್ರೇರಿತರಾಗಿ ಚಳವಳಿಗೆ ಧುಮುಕಿದ್ದಾರೆ. ಮೀಟರ್‌ಜಾಮ್ ಡಾಟ್ ಕಾಂ ಆಂದೋಲನ ಎಷ್ಟು ಜನಪ್ರಿಯವಾಗಿದೆ ಎಂದರೆ ಅದನ್ನು ಪ್ರಸಾರ, ಮರುಪ್ರಸಾರ ಮಾಡುತ್ತಿರುವ ಫೇಸ್ ಬುಕ್ ಮತ್ತು ಟ್ವಿಟ್ಟರ್ ಜಾಲತಾಣಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಜಾಮ್ ಅನ್ನು ಮತ್ತಷ್ಟು ಬಂಪರ್ ಟು ಬಂಪರ್ ಜಾಮ್ ಮಾಡಲು ನಿಮಗೆ ದಟ್ಸ್ ಕನ್ನಡ ಆಹ್ವಾನ ನೀಡುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X