ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ : ಎಚ್‌ಪಿ ಮುಖ್ಯಸ್ಥ ರಾಜೀನಾಮೆ

By Prasad
|
Google Oneindia Kannada News

Mark Hurd
ಸ್ಯಾನ್ ಫ್ರಾನ್ಸಿಸ್ಕೊ, ಆ. 7 : ವಿಶ್ವದ ಪ್ರಮುಖ ವೈಯಕ್ತಿಕ ಕಂಪ್ಯೂಟರ್ ತಯಾರಕ ಹ್ಯೂಲೆಟ್ ಪ್ಯಾಕರ್ಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಹರ್ಡ್ ಅವರು ಕಂಪನಿಯ ಮಾಜಿ ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ಹಿಂಸೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಹೆಸರು ಬಹಿರಂಗಪಡಿಸದ ಮಹಿಳಾ ಅಧಿಕಾರಿ ಕಂಪನಿಯ ಮಾರುಕಟ್ಟೆ ವಿಭಾಗದಲ್ಲಿ 2007ರಿಂದ 2009ರವರೆಗೆ ಕೆಲಸ ಮಾಡುತಿದ್ದರು. ಕಳೆದ ಜೂನ್ ನಲ್ಲಿ ಇವರು ಹರ್ಡ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಎಚ್‌ಪಿಯ ಉತ್ತಮ ಅಧಿಕಾರಿ ಎಂದು ಹೆಸರು ಪಡೆದಿದ್ದ ಮಾರ್ಕ್ ಹರ್ಡ್(53) ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಶುಕ್ರವಾರ ಕಂಪನಿಯ ಶೇರುಗಳು ನಾಸ್ದಾಕ್ ನಲ್ಲಿ ಶೇ. 10ರಷ್ಟು ಕುಸಿತ ದಾಖಲಿಸಿವೆ.

ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಎಚ್‌ಪಿ ಹರ್ಡ್ ಅವರು ಕಂಪನಿಯ ಲೈಂಗಿಕ ಕಿರುಕುಳ ನೀತಿಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದು ಅವರು ಮಹಿಳಾ ಅಧಿಕಾರಿಯೊಂದಿಗೆ ವೈಯಕ್ತಿಕ ಆಪ್ತ ಸಂಬಂಧವನ್ನಷ್ಟೇ ಹೊಂದಿದ್ದರು ಎಂದು ಹೇಳಿದೆ. ಹರ್ಡ್ ಅವರು ಆ ಮಹಿಳೆಗೆ ಅನಗತ್ಯ ಹಣ ವ್ಯಯ ಮಾಡಿದ್ದರಿಂದ ಅವರ ವಿಶ್ವಾಸಾರ್ಹತೆ ಹಾಗೂ ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯಕ್ಕೆ ಧಕ್ಕೆಯಾಗಿದೆ ಎಂದು ಕಂಪನಿಯ ವಕೀಲರು ಹೇಳಿದ್ದಾರೆ.

ಮೂಲಗಳ ಪ್ರಕಾರ ಹರ್ಡ್ ಅವರು ಅನೇಕ ಬಾರಿ ಮಹಿಳೆಯೊಂದಿಗೆ ಸಹಭೋಜನ ಮಾಡಿದ್ದು 20 ಸಾವಿರ ಡಾಲರ್‌ಗಳಿಗೂ ಹೆಚ್ಚು ಹಣವನ್ನು ಇದಕ್ಕಾಗಿ ವ್ಯಯ ಮಾಡಿದ್ದಾರೆ. ಎಚ್‌ಪಿ ಕಂಪನಿ ನೂತನ ಮುಖ್ಯಸ್ಥನ ಆಯ್ಕೆ ಮಾಡುವ ಪ್ರಕ್ರಿಯೆ ಆರಂಬಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X