ಪೆಟ್ರೋಲ್ ದರ ಬೆಲೆ 1 ರು. ಏರಿಕೆ ಸಂಭವ
ನವದೆಹಲಿ,
ಆ. 6 : ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಸರಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯೇ ಮಧ್ಯೆಯೇ ಪೆಟ್ರೋಲ್ ಬೆಲೆ ಏರಿಕೆ ಸಾಹಸಕ್ಕೆ ಕೇಂದ್ರ ಕೈಹಾಕುವ ಸಾಧ್ಯತೆಗಳಿವೆ. ಆಗಸ್ಟ್ ಕೊನೆಯ ವಾರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳನ್ನು 1 ರುಪಾಯಿಗೆ ಹೆಚ್ಚಿಸಲು ಮನಮೋಹನ್ ಸಿಂಗ್ ಸರಕಾರ ತೀರ್ಮಾನಿಸಿದೆ ಎನ್ನಲಾಗಿದೆ. id="toptextpromo">ಇಂಗ್ಲಿಷ್
ವಾಹಿನಿ ಸಿಎನ್ಎನ್-ಐಬಿಎನ್ ಈ ವರದಿ ಮಾಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರಿಂದ ಅನಿವಾರ್ಯವಾಗಿ ಗ್ರಾಹಕರ ಮೇಲೆ ಇನ್ನಷ್ಟು ಹೊರೆ ಹಾಕಲು ಸರಕಾರ ನಿರ್ಧರಿಸಿದೆ. ಚಳಗಾಲ ಅಧಿವೇಶನ ಮುಗಿದ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳನ್ನು ಏರಿಸುವ ಎಲ್ಲ ಲಕ್ಷಣಗಳು ಇವೆ, ಆದರೆ, ಸೀಮೆಎಣ್ಣೆ ಮತ್ತು ಅಡುಗೆ ಅನಿಲ್ ದ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಅಗತ್ಯ
ವಸ್ತುಗಳ ಬೆಲೆಗಳು ಗಗನಕ್ಕೇರಿವೆ ಎಂದು ಪ್ರತಿಪಕ್ಷಗಳು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಅಲ್ಲದೇ, ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಹಾಗೂ ಎಡಪಕ್ಷಗಳ ನೇತೃತ್ವದಲ್ಲಿ ಭಾರತ್ ಬಂದ್ ಮುಷ್ಕರವನ್ನು ಆಚರಿಸಲಾಯಿತು. ಒಟ್ಟಿನಲ್ಲಿ ವಾಹನ ಸವಾರರ ಜೇಬಿಗೆ ಕೇಂದ್ರ ಸರಕಾರ ಕೈಹಾಕುವದಂತೂ ಖಚಿತ.











Click it and Unblock the Notifications