ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಕಾ ಧರಿಸದ ಉಪನ್ಯಾಸಕಿಗೆ ಬಹಿಷ್ಕಾರ!

By Mrutyunjaya Kalmat
|
Google Oneindia Kannada News

Burqa
ಕೊಲ್ಕತ್ತಾ, ಜು. 29 : ಕಾಲೇಜಿಗೆ ಬುರ್ಕಾ ಧರಿಸಿ ಬರಬಾರದು ಎಂದು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹೇಳಿರುವುದು ವರದಿಯಾಗಿದೆ. ಆದರೆ, ಬುರ್ಕಾ ಧರಿಸಿ ಬರದ ಉಪನ್ಯಾಸಕಿಯೊಬ್ಬರನ್ನು ವಿದ್ಯಾರ್ಥಿಗಳೆ ತರಗತಿಯಿಂದ ಬಹಿಷ್ಕರಿಸಿರುವ ಘಟನೆ ಪಶ್ಚಿಮ ಬಂಗಾಲ ಅಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಅಲಿಯಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿಕೊಂಡಿರುವ ಸಿರಿನ್ ಮಿಡ್ಡಿಯಾ ಎಂಬುವವರು ವಿದ್ಯಾರ್ಥಿಗಳಿಂದ ಬಹಿಷ್ಕಾರಕ್ಕೆ ಒಳಗಾಗಿರುವವರು. 24 ವರ್ಷದ ಈ ಉಪನ್ಯಾಸಕಿ ಕಳೆದ ಮೂರು ತಿಂಗಳ ಹಿಂದೆ ಅಲಿಯಾ ವಿಶ್ವವಿದ್ಯಾಲಯವನ್ನು ಸೇರಿಕೊಂಡಿದ್ದಾರೆ. ಆದರೆ, ವಿಶ್ವವಿದ್ಯಾಲಯಕ್ಕೆ ಬುರ್ಕಾ ಧರಿಸದೆ ಬರುತ್ತಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ವಿಶ್ವವಿದ್ಯಾಲಯಕ್ಕೆ ಬುರ್ಕಾ ಧರಿಸಿ ಬರುವಂತೆ ವಿದ್ಯಾರ್ಥಿಗಳು ಉಪನ್ಯಾಸಕಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಉಪನ್ಯಾಸಕಿ ಬುರ್ಕಾ ಧರಿಸದೆ ಬರುತ್ತಿದ್ದರು. ಉಪನ್ಯಾಸಕಿಯ ಈ ಹಠಮಾರಿತನದಿಂದ ವಿದ್ಯಾರ್ಥಿಗಳು ಕೋಪಗೊಂಡು ಅವರನ್ನು ತರಗತಿಯಿಂದಲೇ ಬಹಿಷ್ಕರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪನ್ಯಾಸಕಿ ಸಿರಿನ್, ವಿಶ್ವವಿದ್ಯಾಲಯದೊಳಗೆ ಬುರ್ಕಾ ಧರಿಸಿ ಬರುವಂತೆ ಯುಜಿಸಿಯಲ್ಲಿ ವಸ್ತ್ರಸಂಹಿತೆ ಕಾನೂನು ಅಳವಡಿಸಿಲ್ಲ. ವಿಶ್ವವಿದ್ಯಾಲಯ ಆಡಳಿತ ವರ್ಗವೂ ಕೂಡಾ ನನ್ನ ವಸ್ತ್ರಸಂಹಿತೆ ಬಗ್ಗೆ ಯಾವ ಸೂಚನೆಯನ್ನೂ ಕೊಟ್ಟಿಲ್ಲ. ಆದರೆ, ವಿದ್ಯಾರ್ಥಿಗಳು ಬರ್ಕಾ ಧರಿಸಿ ವಿಶ್ವವಿದ್ಯಾಲಯಕ್ಕೆ ಬರುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X