ಪೊಲೀಸ್ ಬಾತ್ಮೀದಾರೆ ಕುಖ್ಯಾತ ಕಳ್ಳನ ಪತ್ನಿ
ಹಾಸನ,
ಜು. 27 : ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಬಾತ್ಮೀದಾರಿಣಿಯೊಬ್ಬಳು ಡಕಾಯಿತರ ತಂಡದ ನಾಯಕನನ್ನೇ ಮದುವೆಯಾಗಿರುವ ಅಚ್ಚರಿಯ ಘಟನೆ ನಗರದ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. id="toptextpromo">ಶಿವಮೂಗ್ಗ
ಜಿಲ್ಲೆ ಸಾಗರದ ಶಿವಶಂಕರ(29) ಎಂಬಾತ ಕುಖ್ಯಾತ ಕಳ್ಳ. ಪಾರ್ವತಿ ಎಂಬಾಕೆ ಕಳ್ಳ ಶಿವಶಂಕರನನ್ನು ವರಿಸಿದ ಮಹಾಕಳ್ಳಿ. ಶಿವಶಂಕರ ಕಾರವಾರ, ಶಿವಮೂಗ್ಗ, ಭಟ್ಕಳ, ಗೋವಾ ಮತ್ತಿತರ ಕಡೆ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರೂ ಕಳ್ಳತನವನ್ನು ಮಾತ್ರ ಬಿಟ್ಟಿರಲಿಲ್ಲ. id='are-slot-1' class='oiad oi-axt oiadv'> id='top-searched-articles'>ಕಳ್ಳ
ಶಿವಶಂಕರನ ಬಗ್ಗೆ ಮಾಹಿತಿ ಸಂಗ್ರಹವು ಸೇರಿದಂತೆ ಇತರ ಕಳ್ಳತನ ಪ್ರಕರಣಗಳ ಮಾಹಿತಿಗಾಗಿ ಶಿವಮೂಗ್ಗ ಪೊಲೀಸರು ನಗರದ ದುರ್ಗಿ ದೇವಾಲಯ ಬಳಿಯ ನಿವಾಸಿ ಪಾರ್ವತಿ ಎಂಬಾಕೆಯನ್ನು ಮಾಹಿತಿದಾರಳನ್ನಾಗಿ ಬಳಸಿಕೊಳ್ಳುತ್ತಿದ್ದರು. ಆದರೆ, ಕಾಲಕ್ರಮೇಣ ಪಾರ್ವತಿ ಶಿವಶಂಕರನನ್ನೇ ಪ್ರೀತಿಸಿ ಮದುವೆಯಾಗಿದ್ದಾಳೆ. ಶಿವಶಂಕರನ ಆರನೇ ಪತ್ನಿಯಾದ ಪಾರ್ವತಿ ನಂತರ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಈಗ ಬಂಧಿತಳಾಗಿದ್ದಾಳೆ ಎಂದು ಜಿಲ್ಲಾ ಎಸ್ಪಿ ಕೆ ವಿ ಶರತ್ ಚಂದ್ರ ತಿಳಿಸಿದ್ದಾರೆ.











Click it and Unblock the Notifications