10 ಬಂದರುಗಳಲ್ಲಿ ಅದಿರು ರಫ್ತು ನಿಷೇಧ
ನವದೆಹಲಿ,
ಜು. 27 : ರಾಜ್ಯದ 10 ಬಂದರುಗಳಿಂದ ಅದಿರು ರಫ್ತು ಸಾಗಣೆಯನ್ನು ನಿಷೇಧಿಸಿ ರಾಜ್ಯ ಸರಕಾರ ಸೋಮವಾರ ಹೊರಡಿಸಿದೆ. ರಾಜ್ಯ ಸರಕಾರದ ಈ ಕ್ರಮ ಮುಂದಿನ ಆದೇಶ ಹೊರಬೀಳುವವರೆಗೂ ಜಾರಿಯಲ್ಲಿರುತ್ತದೆ. ಈ ಮೂಲಕ ಪಾದಯಾತ್ರೆ ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಮೊದಲನೇ ಏಟು ನೀಡಿದಂತಾಗಿದೆ. id="toptextpromo">ರಾಜ್ಯ
ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸೋಮವಾರ ಈ ಆದೇಶ ಹೊರಡಿಸಿದೆ. ಅನಧಿಕೃತ ಖನಿಜಗಳ ಸಾಗಣೆ ತಡೆಗಟ್ಟಲು ಅಂತಿಮ ರೂಪುರೇಷೆ ಸಿದ್ದವಾಗುವವರೆಗೆ ಅಥವಾ ಮುಂದಿನ ಆದೇಶದವರೆಗೆ ಅದಿರು ರಫ್ತು ನಿಷೇಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಪ್ರಮುಖವಾಗಿ
ಕಾರವಾರ ಮತ್ತು ಬೇಲೇಕೇರಿ ಬಂದರುಗಳ ಪಟ್ಟಿಯಲ್ಲಿ ಸೇರಿವೆ. ಉಳಿದಂತೆ ತದಡಿ, ಭಟ್ಕಳ, ಮಲ್ಪೆ, ಹಳೆ ಮಂಗಳೂರು ಹೊನ್ನಾವರ, ಕುಂದಾಪುರ, ಹಂಗಾರಕಟ್ಟೆ, ಪಡುಬಿದ್ರಿ ಬಂದರುಗಳಿಂದ ಸಹ ಅದಿರು ರಫ್ತು ನಿಷೇಧಿಸಲಾಗಿದೆ. ಆದರೆ, ಮಂಗಳೂರು ಬಂದರು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವುದರಿಂದ ಅದಿರು ರಫ್ತು ಬಹುದೊಡ್ಡ ಕೇಂದ್ರವಾದ ನವಮಂಗಳೂರು ಬಂದರಿನ ಮೂಲಕ ಅದಿರು ರಫ್ತು ನಿರಾತಂಕವಾಗಿ ಮುಂದುವರೆಯಲಿದೆ.











Click it and Unblock the Notifications