ಪಾಕಿಗಳಿಗೆ ಯುಎಸ್ ನೆರವು;ಎಚ್ಚರಿಕೆಯಲ್ಲಿ ಭಾರತ

ನವದೆಹಲಿಯಲ್ಲಿ ಕಾರ್ಗಿಲ್ ಯದ್ಧದ 11ನೇ ವರ್ಷಾಚರಣೆಯಾದ 'ವಿಜಯ್ ದಿವಸ್ 'ಆಚರಣೆಯಲ್ಲಿ ಅಮರ್ ಜವಾನ್ ಜ್ಯೋತಿಗೆ ಪುಷ್ಪ ಗುಚ್ಚ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದ ರಕ್ಷಣಾ ಸಚಿವ ಎಕೆ ಆಂಟನಿ ಈ ವಿಷಯ ತಿಳಿಸಿದರು.
ಕಳೆದ ವಾರ ಅಮೆರಿಕದ ಭದ್ರತಾ ಸಲಹೆಗಾರ ಜೇಮ್ಸ್ ಜೋನ್ಸ್ ಹಾಗೂ ನೌಕಾ ಸೇನೆ ಯ ಮುಖ್ಯಸ್ಥ ಮೈಕ್ ಮುಲ್ಲೆನ್ ಅವರೊಂದಿಗೆ ನಡೆದ ಮಾತುಕತೆಯ ಸಂದರ್ಭದಲ್ಲೂ ಭಾರತದ ಕಳವಳವನ್ನು ತಿಳಿಸಲಾಗಿದೆ ಎಂದು ಅವರು ಹೇಳಿದರು.
ಅಮೆರಿಕ, ಪಾಕಿಸ್ತಾನಕ್ಕೆ ವಾರ್ಷಿಕವಾಗಿ ಬಿಲಿಯನ್ ಗಟ್ಟಲೆ ಮೌಲ್ಯದ ಯುದ್ಧೋಪಕರಣಗಳನ್ನು ಸರಬರಾಜು ಮಾಡುತ್ತಿದ್ದು ಭಯೋತ್ಪಾದಕರ ವಿರುದ್ಧ ಹೋರಾಟಕ್ಕೆ ಬೇಕಾದದ್ದಕ್ಕಿಂತ ಹೆಚ್ಚಿದೆ ಎಂದು ಅವರು ಹೇಳಿದರು.












Click it and Unblock the Notifications