• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಚ್ಚ ಹೊಸ ಬ್ರೌಸರ್ ಎಪಿಕ್ ಪೂರ್ವಾಪರ

By * ಮಹೇಶ್ ಮಲ್ನಾಡ್
|
ವಿಂಡೋಸ್ ಎಕ್ಸ್ ಪ್ಲೋರರ್ 6 ಅವಸಾನದ ಬೆನ್ನಲ್ಲೇ ಗೂಗಲ್ ಕ್ರೋಮ್ ಮಾರುಕಟ್ಟೆ ಪ್ರವೇಶಿಸಿದರೂ ಹೆಚ್ಚಿಗೆ ಸುದ್ದಿ ಮಾಡಲಿಲ್ಲ. ಆದರೆ ಇದರೆಲ್ಲದರ ಲಾಭ ಪಡೆದಿದ್ದು ಮಾತ್ರ ಮೊಝಿಲ್ಲಾ. ಭಾರತೀಯ ಜನಮನ ಗೆಲ್ಲಲು ಮೊಝಿಲ್ಲಾ ತನ್ನ ಬತ್ತಳಿಕೆಯಿಂದ ಬ್ರಹ್ಮಾಸ್ತ್ರದಂಥ ಬ್ರೌಸರ್ ಪ್ರಯೋಗಿಸಿದ್ದು, ಯುವಜನರ ಮನ ಗೆಲ್ಲುವಲ್ಲಿ ಸಫಲವಾಗುವ ಎಲ್ಲಾ ಸಾಧ್ಯತೆಗಳಿವೆ.

ಸುಮಾರು 1500ಕ್ಕೂ ಥೀಮ್ ಗಳೊಂದಿಗೆ ಶ್ರೀಮಂತಿಕೆಯೇ ಮೈವೆತ್ತಿದ್ದಂತಿರುವ ಎಪಿಕ್ ಮೊದಲ ನೋಟಕ್ಕೆ ಎಲ್ಲರನ್ನು ಮೋಡಿ ಮಾಡದೆ ಬಿಡದು.

ಆಂಟಿ ವೈರಸ್ ವುಳ್ಳ ಪ್ರಪ್ರಥಮ ಬ್ರೌಸರ್, ಖಾಸಗಿ ಬ್ರೌಸಿಂಗ್, ಸುರಕ್ಷತೆಯಲ್ಲಿ ಉತ್ಕೃಷ್ಟ ಸೇವೆ, ಪ್ರಥಮ ಬಾರಿಗೆ ಸೈಡ್ ಬಾರ್ ನಲ್ಲಿ ಆಪ್ಸ್ ಇರುವ ಬ್ರೌಸರ್ ಎಂದೆಲ್ಲ ಗುಣವಿಶೇಷಗಳೊಂದಿಗೆ ಜಾಲಿಗರ ಮುಂದೆ ನಿಲ್ಲುವ ಎಪಿಕ್ ತನ್ನ ಘೋಷಣೆಗೆ ತಕ್ಕಂತೆ ಇದೆ.

ಮೊಟ್ಟ ಮೊದಲ ಅನುಭವ ಕಥನ ಹಾಗೂ ಅನಿಸಿಕೆ ಹೀಗಿದೆ.
* ಮೊದಲಿಗೆ ವಿಡಿಯೋವುಳ್ಳ ಅಥವಾ ಫ್ಲಾಶ್ ಬಳಕೆ ಮಾಡಿರುವ ವೆಬ್ ಸೈಟ್ ತೆರೆಯಲು ಪ್ರಯತ್ನಿಸಿದೆ. ವೆಬ್ ತಾಣದಲ್ಲಿ ಫ್ಲಾಶ್ ಅಥವಾ ವಿಡಿಯೋ ಇರುವುದು ಕಂಡು ಬಂದ ತಕ್ಷಣ, ವಿಡಿಯೋವನ್ನು ಪ್ರತ್ಯೇಕವಾಗಿ ಸೈಡ್ ಬಾರ್ ನಲ್ಲಿ ವೀಕ್ಷಿಸಲು ಅಥವಾ ಪ್ಲೇ ಲಿಸ್ಟ್ ಗೆ ಸೇರಿಸಲು ಕೇಳುವ ಸಂದೇಶ ಬರುತ್ತದೆ.

* ಎಪಿಕ್ ತೆರೆದ ತಕ್ಷಣ ಕಣ್ ತಣಿಸುವುದು ಅದರ ಥೀಮ್ ಅಥವಾ ವಾಲ್ ಪೇಪರ್ ಆಗಿ ಅಥವಾ ಎರಡನ್ನೂ ಅಳವಡಿಸುವ ಸೌಲಭ್ಯ ಇದೆ.

* ಜನ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ, ಕ್ರೀಡೆ, ಸಿನಿಮಾ, ಕಲೆ, ಸಂಗೀತ, ರಾಜಕೀಯ, ಪ್ರಕೃತಿ ಹೀಗೆ ವಿವಿಧ ರಂಗದ ಹೆಸರಾಂತ ವ್ಯಕ್ತಿ ಸ್ಥಳ ಹಾಗೂ ವಿಶೇಷ ಚಿತ್ರಗಳ ಥೀಮ್ ಗಳು ಅದ್ಭುತವಾಗಿದೆ. ವೀತಮ್ಮ ನೆಚ್ಚಿನ ಥೀಮ್ ರೂಪಿಸಿಕೊಳ್ಳಲು ವೀಕ್ಷಕರಿಗೆ ಅವಕಾಶ ಕೂಡ ಇದೆ.

* ಕನ್ನಡಕ್ಕೂ ತಕ್ಕಮಟ್ಟಿನ ಮಾನ್ಯತೆ ಸಿಕ್ಕಿದ್ದು ಡಾ. ರಾಜ್ ಕುಮಾರ್ , ಡಾ.ವಿಷ್ಣುವರ್ಧನ್ ರಿಂದ ಹಿಡಿದು ರಮ್ಯಾ, ಗಣೇಶ್, ಉಪೇಂದ್ರ ಎಲ್ಲಾ ಥೀಮ್ ನಲ್ಲಿ ಸೇರಿಬಿಟ್ಟಿದ್ದಾರೆ. ಆದ್ರೆ ಉಪೇಂದ್ರರ ಹೆಂಡತಿ ಮಾತ್ರ ಇನ್ನೂ ತಮಿಳು ಥೀಮ್ ನಲ್ಲೇ ಇದ್ದಾರೆ. ಕರ್ನಾಟಕದ ವೈಶಿಷ್ಟ್ಯಗಳು ಎಲ್ಲಾ ರಂಗದ ಥೀಮ್ ಗಳಲ್ಲೂ ಇರುವುದು ವಿಶೇಷ.

* ಆದರೂ ಥೀಮ್ ಗಳಲ್ಲಿ ಕೆಲವು ಎದ್ದು ಕಾಣಬಲ್ಲ ಲೋಪಗಳಿವೆ. ಆಧ್ಯಾತ್ಮ ನಾಯಕರಲ್ಲಿ ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರೆ ನಾಪತ್ತೆ(ಫೈರ್ ಫಾಕ್ಸ್ ಪರ್ಸೋನಾದಲ್ಲಿದ್ದರೂ). ಸಂಗೀತಗಾರರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂಗೆ ಸ್ಥಾನ ಸಿಗದಿರುವುದು ಅಚ್ಚರಿಯಾದರೂ ಸತ್ಯ.

* ವಿಶ್ವದೆಲ್ಲೆಡೆಯ ಸುದ್ದಿ ನಿಮ್ಮ ಬೆರಳ ತುದಿಯಲ್ಲಿ ಸಿಗುತ್ತದೆ. ವಿಶ್ವ,ರಾಷ್ಟ್ರೀಯ, ಸ್ಥಳೀಯ, ಕ್ರೀಡೆ, ಮನರಂಜನೆ, ಅರೋಗ್ಯದ ಸುದ್ದಿಗಳು ತಕ್ಷಣಕ್ಕೆ ಸಿಗುತ್ತದೆ.
ನೆಚ್ಚಿನ ಸುದ್ದಿವಾಹಿನಿಗಳನ್ನು ಓದಲು ನೀವು ಬುಕ್ ಮಾರ್ಕ್ ಮಾಡಿಕೊಳ್ಳುವ ಬದಲು ರೆಡಿಮೇಡ್ ಬುಕ್ ಮಾರ್ಕ್ ಆಗಿ ಸಿದ್ಧವಾಗಿದೆ ಎಪಿಕ್.

* ಒನ್ ಇಂಡಿಯಾ ಸಮೂಹದ ಹಿಂದಿ, ಕನ್ನಡ, ಮಲೆಯಾಳಂ, ತೆಲುಗು ಹಾಗೂ ತಮಿಳು ವೆಬ್ ತಾಣಗಳು ಸೇರಿದಂತೆ ಪ್ರಾದೇಶಿಕತೆ ಒತ್ತು ನೀಡಿರುವ ಐದಾರು ತಾಣಗಳು ಸಿಗುತ್ತವೆ.

* ಕ್ರಿಕೆಟ್ ಲೈವ್ ಸ್ಕೋರ್ ಹಾಗೂ ಸುದ್ದಿಗೆ ಪ್ರತ್ಯೇಕ ವಿಭಾಗ ರೂಪಿಸಲಾಗಿದೆ.
* ವ್ಯಾಪಾರ ವಹಿವಾಟು, ಷೇರುಪೇಟೆ ಸುದ್ದಿಯನ್ನು ಒಂದೆಡೆ ಸಿಗುವಂತೆ ಮಾಡಿದ ಎಪಿಕ್ ನಿಜಕ್ಕೂ ಅಭಿನಂದನಾರ್ಹ.
* ನಗರವಾರು ಕಾರ್ಯಕ್ರಮಗಳ ಪಟ್ಟಿ ಸಿಗುತ್ತದೆ.
* ಜೋಕ್ಸ್ ಫಾರ್ ದ ಡೇ ಒಳ್ಳೆ ಪ್ರಯೋಗ.
* ಎನ್ ಡಿಟಿವಿ ಲೈವ್ ಟಿವಿಯ ವಿವಿಧ ವಿಡಿಯೋ ಇದೆ.

* ವಿಡಿಯೋ ವಿಭಾಗದಲ್ಲಿ ಕನ್ನಡ(ಟಿವಿ 9 ನ ಹಳೆ ವಿಡಿಯೋಗಳು ಮಾತ್ರ ಇದೆ) ಸೇರಿದಂತೆ ಇತರೆ ಭಾಷೆಯ ಸುದ್ದಿ ಹಾಗೂ ಮನರಂಜನೆ.

* ಎನ್ ಡಿಟಿವಿ ಸುದ್ದಿ ವಿಡಿಯೋದಲ್ಲಿ ಪ್ರಣವ್ ರಾಯ್ ಜೊತೆ ರಮ್ಯ ಸಂದರ್ಶನ ಸಿಗುತ್ತದೆ. 'ಕನ್ನಡದಲ್ಲಿ ರಿಮೇಕ್ ಜಾಸ್ತಿ' ಅನ್ನುವ ರಮ್ಯಾ, ಕನ್ನಡದ ಡೈಲಾಗ್ ಹೇಳು ಅಂದ್ರೆ 'ಅಮೃತಧಾರೆ ಚಿತ್ರದ ಡೈಲಾಗ್ ಅನ್ನು ಇಂಗ್ಲೀಷ್ ನಲ್ಲೇ ಹೇಳಿ' ಅಚ್ಚರಿ ಮೂಡಿಸುವ ದಿವ್ಯ ಸ್ಪಂದನರ ವಿಡಿಯೋ ನೋಡಬಹುದು.

ಆಂಟಿ ವೈರಸ್ ಒಂದು ಬಿಗ್ ಪ್ಲಸ್ ಎನ್ನಬಹುದಾದರೂ ಆಗಲೇ ಗಣಕದಲ್ಲಿರುವ ಆಂಟಿ ವೈರಸ್ ಗೂ ಇದಕ್ಕೂ ಏನು ವ್ಯತ್ಯಾಸ ಇದು ಹೇಗೆ ವಿಭಿನ್ನ. ಎರಡರ ನಡುವೆ ಪೈಪೋಟಿಯಲ್ಲಿ ಗಣಕದ ಗತಿಯೇನು ಎಂಬ ಚಿಂತೆ ಮೂಡುವುದು ಸಹಜ. ನಿಮ್ಮ ಗಣಕದಲ್ಲಿ ಈಗಾಗಲೇ ಆಂಟಿವೈರಸ್ ಸರಿ ಇದ್ದರೆ ಬ್ರೌಸರ್ ಅಂಟಿ ವೈರಸ್ ಗೆ ಹೆಚ್ಚಿನ ತೊಂದರೆ ಕೊಡದಿರುವುದೇ ಲೇಸು. ಇಲ್ಲದಿದ್ದರೆ ಬ್ರೌಸರ್ ಅಂಟಿ ವೈಸರ್ ಅತ್ಯುತ್ತಮ ಸಾಧನ.

* ಮಿನಿ ಟೆಕ್ಸ್ಟ್ ಎಡಿಟರ್(word processor) ಹಾಗೂ ಇಂಡಿಕ್ ಟ್ರಾನ್ಸ್ ಲಿಟೆರೇಷನ್ ಟೂಲ್ ಗಳು ಬ್ರೌಸರ್ ನಿಂದ ನಿಮ್ಮನ್ನು ಹೊರಕ್ಕೆ ಕಳಿಸದೆ ಹಿಡಿದಿಟ್ಟುಕೊಳ್ಳಲು ಮಾಡಿದ ಸೌಲಭ್ಯ ಎನ್ನಬಹುದು.

* ಎಪಿಕ್ ರೈಟ್ ನಲ್ಲಿ ಯೂನಿಕೋಡ್ ಇಂಡಿಕ್ ಅಥವಾ ಇತರೆ ಶೈಲಿಯಲ್ಲಿ ಬೇಕಾದ್ದು ಬರೆಯಬಹುದು, ANSI ನಲ್ಲಿ ಬರೆಯಬಹುದಾದರೂ ಏನು ಬರೆದಿರಿ ಎಂದು ತಿಳಿಯುವುದಿಲ್ಲ. ಕಾರಣ ಫಾಂಟ್ ಸಫೋರ್ಟ್ ಇಲ್ಲ. ಯೂನಿಕೋಡ್ ಗೂ ಕೂಡ ಸ್ಥಳೀಯ ಐ ಮೀನ್ ಕನ್ನಡ, ತೆಲುಗು, ತಮಿಳು ಇತರೆ ಭಾಷೆಗಳ ಫಾಂಟ್ ಗಳಿಲ್ಲ. ಬಲವಂತವಾಗಿ ಇಂಡಿಕ್ ಗೆ ದೂಡಿದ್ದಂತಿದೆ.

* ವೆಬ್ ಸ್ನಿಪೆಟ್ಸ್ ಸುಲಭವಾಗಿ ಬಳಕೆ ಮಾಡಲು ಅನುಕೂಲ ಕಲ್ಪಿಸಲಾಗಿದೆ.
* ವಿಡಿಯೋ ಪ್ಲೇ ಲೀಸ್ಟ್ ಇದೆ. ಎಕ್ಸ್ ಪ್ಲೋರರ್ , ಕಾರ್ಯಕ್ರಮ ಪಟ್ಟಿ ತಯಾರಿಕೆಗೆ ಅವಕಾಶ, ಟೈಮರ್ ಇತ್ಯಾದಿ ಕೂಡ ಲಭ್ಯ.
* ಸಾಮಾಜಿಕ ಜಾಲತಾಣ ಫೇಸ್ ಬುಕ್, ಆರ್ಕುಟ್ , ಜೀಮೇಲ್, ಯಾಹೂ ಮೇಲ್ ಅಲ್ಲದೆ ಟ್ವಿಟ್ಟರ್ ಕೂಡಾ ಸೈಡ್ ಬಾರ್ ನಲ್ಲಿ ಸ್ಥಾನ ಗಳಿಸಿದೆ.
* ಗೂಗಲ್ ಮ್ಯಾಪ್ಸ್ , ಕೆಲಸ ಹುಡುಕುವವರಿಗೆ ಜಾಲತಾಣಗಳು, ಪ್ರವಾಸಿಗರಿಗೆ ತಾಣ ಸೂಚಿಗಳಿವೆ.
* ಉಳಿದಂತೆ ಫೈರ್ ಫಾಕ್ಸ್ ನಲ್ಲಿದ್ದಂತೆ ಡೌನ್ ಲೋಡ್ , ಹಿಸ್ಟರಿ, ಆಡ್ ಆನ್ಸ್ ಇದೆ.

* ಕೊನೆಯದಾಗಿ ಹಾಗೂ ಮುಖ್ಯವಾಗಿ ಎಪಿಕ್ ನ ವಿಶೇಷ ಅಡ್ ಆನ್ಸ್ ಗಳು ತುಂಬಾ ಸಹಕಾರಿಯಾಗಿ ಹೊರ ಹೊಮ್ಮಿದೆ.
* ಫೈಲ್ ಮ್ಯಾನೇಜರ್ ಸೌಲಭ್ಯದ ಮೂಲಕ ಜೀಮೇಲ್ ಖಾತೆ ಬಳಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಡಬಹುದಾಗಿದೆ.
* ಎಪಿಕ್ ಆಡ್ ಆನ್ ಗಳದ್ದೇ ದೊಡ್ಡ ಕಥೆ ಹೇಳಬಹುದು. ಐಫೋನ್ ಆಡ್ ಅನ್ ಗಳಂತೆ ವಿವಿಧ ಬಗೆಯಲ್ಲಿ ದೊರೆಯುತ್ತದೆಯಾದರೂ ರೇಡಿಯೋ ಸ್ಥಳೀಯವಾಗಿ ಇನ್ನೂ ರೂಪಿತವಾಗಿಲ್ಲ.

ಬ್ರೌಸರ್ ಮಾರುಕಟ್ಟೆ ಈಗಾಗಲೇ ಶೇ.46.6% ಜೂನ್ ಫೈರ್ ಫಾಕ್ಸ್, 15.7 IE8 ಇದೆ. ಎಪಿಕ್ ಮೂಲಕ ಯುವ ಸಮುದಾಯದ ಮನಗೆಲ್ಲುವಲ್ಲಿ ಮೋಝಿಲ್ಲಾ ಯಶಸ್ವಿಯಾಗಬಹುದು. ಮೋಝಿಲ್ಲಾ ಫೈರ್ ಫಾಕ್ಸ್ ಕೂಡ ಲಭ್ಯವಾಗುತ್ತಿದ್ದು, ಮಾರುಕಟ್ಟೆಯನ್ನು ತೋಳಗಳು ಸಂಪೂರ್ಣವಾಗಿ ನುಂಗುವ ಸಾಧ್ಯತೆಯಿದೆ.

ಆದ್ರೆ ಗಣಕದ ಮೆಮೊರಿಯನ್ನು ಎಪಿಕ್ ಹೆಚ್ಚು ಬಳಕೆ ಮಾಡುವುದರ ಮೂಲಕ ಕಡಿಮೆ ವೇಗದ ಗಣಕಗಳಲ್ಲಿ ಜನಪ್ರಿಯತೆ ಕಳೆದು ಕೊಳ್ಳುವ ಸಂಭವವೂ ಇದೆ. ಒಟ್ಟಾರೆ ಹೊಸದರ ಅನ್ವೇಷಣೆ, ಹುಡುಕಾಟಕ್ಕೆ ಹಾದಿ ತೋರುವ ಬ್ರೌಸರ್ ಗಳಿಗೆ ಜಾಲಿಗರು ಜಾರಿ ಹೋಗುವುದಂತೂ ಖಂಡಿತಾ.

ಡಿಸೈನ್, ಥೀಮ್ಸ್:4/5
ಸುರಕ್ಷತೆ: 4.5/5
ಗ್ರಾಹಕ ಸಂವೇದಿತನ:4/5
ತಾಂತ್ರಿಕತೆ:3.75/5

WOT ಎಂಬ ಸುರಕ್ಷಿತ ಬ್ರೌಸಿಂಗ್ ಗಾಗಿ ಇರುವ ಸಾಧನ ಕೂಡಾ ಇದರಲ್ಲಿದೆ. ಇದರ ಮೂಲಕ ನೀವು ವೀಕ್ಷಿಸುವ ಬ್ರೌಸರ್ ನ ಸುರಕ್ಷತೆ ಬಗ್ಗೆ ವೋಟ್ ಮಾಡಿ ತಿಳಿಸಬಹುದು. ಆತಂಕಕಾರಿ ತಾಣಗಳು ಕಂಡು ಬಂದರೆ ತಡೆಗಟ್ಟಲು ಇದು ಸಹಕಾರಿಯಾಗಿದೆ.

ಕೊನೆಯದಾಗಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಮೊಝಿಲ್ಲಾಗಾಗಿ ಎಪಿಕ್ ಅನ್ನು ಅಭಿವೃದ್ಧಿಪಡಿಸಿದ್ದು ಹಿಡನ್ ರಿಫ್ಲೆಕ್ಸ್ ಎಂಬ ಬೆಂಗಳೂರಿನ ಪುಟ್ಟ ಕಂಪೆನಿ. ಇನ್ನೇಕೆ ತಡ ನಿಮ್ಮ ಗಣಕಕ್ಕೆ ಎಪಿಕ್ ಬ್ರೌಸರ್ [http://www.epicbrowser.com/]ಅನ್ನು ಇಳಿಸಿಕೊಳ್ಳಿ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more