ಯುನಿಸಿಸ್ ನ ಮಹಿಳಾ ಟೆಕ್ಕಿ ಆತ್ಮಹತ್ಯೆ

Unisys woman techie commits suicide
ಬೆಂಗಳೂರು.ಜು.20: ಕೈತುಂಬಾ ಸಂಬಳ ಪಡೆವ ಸಾಫ್ಟ್ ವೇರ್ ಉದ್ಯೋಗಿಗಳು ಸದಾ ಸುಖೀ ಜೀವನ ನಡೆಸುತ್ತಾರೆ ಎಂಬ ಸಾಮಾನ್ಯ ನಂಬಿಕೆ ಬರೀ ಭ್ರಮೆ ಎಂಬುದು ಇತ್ತೀಚಿನ ಆತ್ಮಹತ್ಯೆ ಪ್ರಕರಣಗಳಿಂದ ವೇದ್ಯವಾಗುತ್ತದೆ.

ಆತ್ಮಹತ್ಯೆಗಳ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಮತ್ತೊಬ್ಬ ಟೆಕ್ಕಿ ಮಾನಸಿಕವಾಗಿ ನೊಂದು ಜೀವ ಕಳೆದು ಕೊಂಡಿದ್ದಾರೆ. ರಿಚಮಂಡ್ ಸರ್ಕಲ್ ಬಳಿ ಇರುವ ಯುನಿಸಿಸ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ. ಶೋಭೆಗಾ ಮೇರಿ (27)ಮೃತಪಟ್ಟವಳು.

ಕಳೆದ ನಾಲ್ಕು ವರ್ಷಗಳ ಹಿಂದೆ ಇವಳಿಗೆ ಕೇರಳದಲ್ಲಿ ಮದುವೆಯಾಗಿತ್ತು.ಆದರೆ ಇಬ್ಬರ ಮನಸಾಪ್ತದಿಂದ ವಿಚ್ಛೇದನ ಪಡೆದಿದ್ದು ಬೆಂಗಳೂರಿನ ಜೆ.ಪಿ.ನಗರದ ಸಾರಕ್ಕಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಳು. ಭಾನುವಾರ ತಮ್ಮ ಕೋಣೆಯಲ್ಲಿ ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಕೆಯ ಸಹೋದರ ಮೊಬೈಲ್‌ನಲ್ಲಿ ಸಂಪರ್ಕಿಸಿದ್ದಾನೆ.ಆದರೆ ಯಾರೂ ಪ್ರತಿಕ್ರಿಯೆ ನೀಡದ ಕಾರಣ ಪೊಲೀಸರನ್ನು ಕರೆದುಕೊಂಡು ಹೋಗಿ ನೋಡಿದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬಂದಿದೆ.

ಕಂಪನಿಯ ಸಹೋದ್ಯೋಗಿಯೊಂದಿಗೆ ಈಕೆಗೆ ಸಂಬಂಧವಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮನಸ್ತಾಪದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+