3D ಕಂಪ್ಯೂಟರ್ ತಯಾರಿಕೆಯತ್ತ ಎಲ್ ಜಿ ಚಿತ್ತ

ಹೊಸ ಲ್ಯಾಪ್ ಟಾಪ್ ಮಾದರಿ ಹಾಗೂ ಕಂಪ್ಯೂಟರ್ ಗಳನ್ನು ತಯಾರಿಸಿದ್ದು ಇವು 3ಡಿ ಚಲನ ಚಿತ್ರ ಹಾಗೂ ಸಂಬಂಧಿತ ಸೌಲಭ್ಯಗಳಿರುತ್ತದೆ. 3ಡಿ ತಂತ್ರಜ್ಞಾನದ ಅಭಿವೃದ್ದಿಗೆ ಕಂಪ್ಯೂಟರ್ ಗಳು ಅತ್ಯವಶ್ಯಕ ಎಂದೂ ಕಂಪೆನಿ ಹೇಳಿದೆ.
ಹೊಸ ಮಾದರಿಯ ಲ್ಯಾಪ್ ಟಾಪ್ ಗಳ ಬೆಲೆ 1315 ಡಾಲರ್ ಗಳಿಂದ 1640 ಡಾಲರ್ ಗಳಾಗಲಿವೆ ಎಂದು ತಿಳಿಸಿದ ಕಂಪೆನಿ 2011 ರಲ್ಲಿ ಕಂಪೆನಿಯ ಮಾರಾಟದಲ್ಲಿ ಈ ಮಾದರಿಯ ಲ್ಯಾಪ್ ಟಾಪ್ ಗಳ ಪಾಲು ಶೇ.30 ರಷ್ಟು ಇರಲಿದೆ ಎಂದಿದೆ . 3ಡಿ ಎಫೆಕ್ಟ್ಸ್ ಗಳನ್ನು ಪಡೆಯಬೆಕಾದರೆ ಕನ್ನಡಕಗಳನ್ನು ಧರಿಸಬೇಕಾಗುತ್ತದೆ ಎಂದೂ ಕಂಪೆನಿ ಹೇಳಿದೆ.
ಸಮತಟ್ಟಾದ ಸ್ಕ್ರೀನ್ ಗಳನ್ನು ಹೊಂದಿರುವ ಟಿವಿಗಳ ತಯಾರಿಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಕಂಪೆನಿ ಈ ವರ್ಷ 1 ಮಿಲಿಯನ್ 3ಡಿ ಟಿವಿಗಳನ್ನು ಮಾರಾಟ ಮಾಡಲಿರುವುದಾಗಿ ಹೇಳಿದೆ. ಈ ಮಾದರಿಯ ಟಿವಿ ಹಾಗೂ ಕಂಪ್ಯೂಟರ್ ಗಳಿಗೆ ಉದ್ಯಮದಲ್ಲಿ ಹೊಸ ಬೇಡಿಕೆ ಸೃಷ್ಟಿಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.












Click it and Unblock the Notifications