ವಿವಾಹಕ್ಕೆ ನಕಾರ : ಆಯುರ್ವೇದ ವೈದ್ಯೆ ಆತ್ಮಹತ್ಯೆ
ಬೆಂಗಳೂರು,
ಜು. 20 : ಪ್ರಿಯಕರ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ವಿಚ್ಛೇದಿತ ಆಯುರ್ವೇದ ವೈದ್ಯೆರೊಬ್ಬರು ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಪಿಗೆ ಲೇಔಟ್ ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. id="toptextpromo">ಸಂಪಿಗೆ
ಲೇಔಟ್ ನ ಆರನೇ ತಿರುವಿನಲ್ಲಿರುವ ಬೃಂದಾವನ ಅಪಾರ್ಟ್ ಮೆಂಟ್ ನಿವಾಸಿ ರೂಪಾ(35) ಅತ್ಮಹತ್ಯೆ ಮಾಡಿಕೊಂಡವರು. ಆಯುರ್ವೇದ ವೈದ್ಯರಾಗಿದ್ದ ಅವರು ಕ್ಲಿನಿಕ್ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ ಸುಮಾರು 7.45ರ ಸುಮಾರಿಗೆ ಅವರು ಮಹಡಿ ಹಾರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರೂಪಾ
ಹತ್ತು ವರ್ಷಗಳ ಹಿಂದೆ ಲೋಕೇಶ್ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಅನಿತಾ ಮತ್ತು ತನಿಷ್ ಎಂಬ ಇಬ್ಬರು ಮಕ್ಕಳಿದ್ದಾರೆ. ದಂಪತಿಗಳ ಮಧ್ಯೆ ವಿರಸ ಉಂಟಾಗಿದ್ದರಿಂದ ರೂಪಾ ಅವರು ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಅನಂತರ ಅವರು ಬೃಂದಾವನ ಅಪಾರ್ಟ್ ಮೆಂಟ್ ಗೆ ಬಂದು ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೂಪಾ ಅವರು ವಿಜಯನಗರದ ಎಂಸಿ ಲೇಔಟ್ ನಿವಾಸಿ ಅರುಣ್ ಎಂಬುವವರನ್ನು ಪ್ರೀತಿಸುತ್ತಿದ್ದರು.











Click it and Unblock the Notifications