ಹೊಗೇನಕಲ್ ಕಾಮಗಾರಿ ಶೀಘ್ರ ಪೂರ್ಣ : ಸ್ಟಾಲಿನ್

ಜಪಾನ್ ಬ್ಯಾಂಕಿನ 1321 ಕೋಟಿ ರುಪಾಯಿ ಸಾಲದ ನೆರವಿನೊಂದಿಗೆ ಈ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ತಮಿಳುನಾಡು ಸರಕಾರ ಯೋಜನೆಯ ವೆಚ್ಚವನ್ನು 1928 ಕೋಟಿ ರುಪಾಯಿಗಳಿಗೆ ನಿಗದಿಪಡಿಸಿದ್ದು, ಒಟ್ಟು ಐದು ಹಂತದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದೆ.
2012ರೊಳಗೆ ಉದ್ದೇಶಿತ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಹೊಗೇನಕಲ್ ನಿಂದ 45 ಕಿಮೀ ದೂರದೊಳಗಿನ ಎಲ್ಲಾ ಗ್ರಾಮಗಳಿಗೂ ಶಾಶ್ವತವಾಗಿ ಕುಡಿಯುವ ನೀರು ಪೂರೈಸುತ್ತೇವೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಯೋಜನೆ ತಡೆಯುವಂತೆ ಸುಪ್ರಿಂಕೋರ್ಟ್ ಗೆ ಮೊರೆ ಹೋಗುತ್ತೇವೆ. ನ್ಯಾಯವಾದಿ ಫಾಲಿ ನಾರಿಮನ್ ಜೊತೆ ಮತ್ತೊಮ್ಮೆ ಮಾತನಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಸುಪ್ರಿಂಕೋರ್ಟ್ ಆದೇಶ ಉಲ್ಲಂಘಿಸಿ ಕಾಮಗಾರಿ ನಿರ್ವಹಿಸಿದರೆ ಕಾನೂನು ಕ್ರಮ ಅನಿವಾರ್ಯವಾಗುತ್ತದೆ. ತಮಿಳುನಾಡಿನ ಹಠಮಾರಿತನ ತಡೆಯಲು ಕೇಂದ್ರ ಮಧ್ಯೆ ಪ್ರವೇಶಿಸಬೇಕು ಎಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.












Click it and Unblock the Notifications