ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧ್ಯಾತ್ಮದಿಂದ ಸಾಮಾಜಿಕ ನೆಮ್ಮದಿ ಸಾಧ್ಯ:ದೇವೇಗೌಡ

By Mahesh
|
Google Oneindia Kannada News

HD Devegowda
ಬೆಂಗಳೂರು, ಜು.19: ಸಾಮಾಜಿಕ ಶಾಂತಿ ಹಾಗೂ ಐಕ್ಯತೆ ಕಾಪಾಡುವಲ್ಲಿ ಅಧ್ಯಾತ್ಮಿಕತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯ ಕೇಳಿ ಗೌಡರು ರಾಜಕೀಯ ಸಂನ್ಯಾಸ ತೆಗೆದುಕೊಳ್ಳಲಿದ್ದಾರೆಯೇ ಎಂದು ಹುಬ್ಬೇರಿಸಬೇಿ. ಇದು ಸಮಯೋಚಿತವಾಗಿ ಬಂದ ಮಾತುಗಳು.

ಶಕ್ತಿವೇದ ವೆಲ್‌ನೆಸ್ ಮಿಷನ್ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸ್ಪಿರಿಚ್ಯುಯಲ್ ಸೈನ್ಸ್ ಕುರಿತ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧ್ಯಾತ್ಮಿಕತೆಯಿಂದ ಮಾತ್ರ ಸಾಮಾಜಿಕ ನೆಮ್ಮದಿ ಸಾಧ್ಯ ಎಂದರು.

ಪ್ರತಿಯೊಬ್ಬರೂ ಆದಷ್ಟು ಅಧ್ಯಾತ್ಮಿಕ ವಿಚಾರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಈ ಬಗ್ಗೆ ಎಲ್ಲರೂ ಆಸಕ್ತಿ ತೋರಬೇಕಿದೆ. ಇಂತಹುದೇ ನಿಟ್ಟಿನಲ್ಲಿ ಅಧ್ಯಾತ್ಮಿಕ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಂಡುವಲ್ಲಿ ಶಕ್ತಿವೇದ ವೆಲ್‌ನೆಸ್ ಮಿಷನ್ ಸಾಕಷ್ಟು ಸಂಶೋಧನೆಗಳನ್ನು ನಡೆಸಿದೆ. ಹೀಗೆಯೇ ಮುಂದೆಯೂ ಕೂಡ ಹೊಸ ರೀತಿಯ ಸಂಶೋಧನೆಗಳನ್ನು ದೇಶಕ್ಕೆ ಪರಿಚಯಿಸಲಿ ಎಂದರು.

ಶಕ್ತಿವೇದ ವೆಲ್‌ನೆಸ್ ಮಿಷನ್‌ನ ಸ್ಥಾಪಕರಾದ ಋಷಿದೇವ ಶ್ರೀ ನರೇಂದ್ರನ್ ಜೀ ಮಾತನಾಡಿ, ಅಧ್ಯಾತ್ಮಿಕ ವಿಚಾರಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಳ್ಳುವ ಮೂಲಕ ಮೋಕ್ಷ ಪಡೆಯಬಹುದು. ಅಲ್ಲದೆ, ಭಗವಂತನಿಗೆ ಸಮೀಪವಾಗಬಹುದು ಎಂದು ಹೇಳಿದರು.

ವೆಬ್‌ಸೈಟ್‌(www.shakthiveda.com)ಗೆ ಚಾಲನೆ ಇದೇ ವೇಳೆ ದೇವೇಗೌಡರು, ಶಕ್ತಿವೇದ ವೆಲ್‌ನೆಸ್ ಮಿಷನ್‌ನ ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಿದರಲ್ಲದೆ ಕಾರ್ಯಕ್ರಮದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶಕ್ತಿವೇದ ವೆಲ್‌ನೆಸ್ ಮಿಷನ್‌ನ ವ್ಯವಸ್ಥಾಪಕಿ ಶ್ರೀಪ್ರಿಯಾ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಎಸ್. ರಂಗನಾಥ್, ಡಾ. ಪ್ರಶಾಂತ್ ಈಶ್ವರ್ ಮೊದಲಾದವರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X