ವಿಮಾನ ದುರಂತ; ಇಬ್ಬರು ಬೆಂಗಳೂರಿಗರು ಸಾವು
ವಾಷಿಂಗ್ಟನ್,
ಜು.17: ಇಬ್ಬರು ಭಾರತೀಯ ಸೋದರರು ಹಾಗೂ ಒಬ್ಬ ಅಮೆರಿಕನ್ ಪ್ರಜೆ ವಿಮಾನ ದುರಂತದಲ್ಲಿ ಮೃತಪಟ್ಟ ಘಟನೆ ಜು.13ರಂದು ನಡೆದಿದೆ. ಮೃತರನ್ನು ಕಾರ್ತಿಕ್ ಕಲೈಸೆಲ್ವನ್ (22) ಹಾಗೂ ಪ್ರತೀಕ್ ಕಲೈಸೆಲ್ವನ್(19) ಎಂದು ಗುರುತಿಸಲಾಗಿದೆ. ಮೃತರ ತಂದೆ ಅಲಂಗಿಯಂ ಪಿ ಕಲೈಸೆಲ್ವನ್ ಬೆಂಗಳೂರಿನ ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. id="toptextpromo">ಕಾರ್ತಿಕ್
ಹಾಗೂ ಪ್ರತೀಕ್ ಪ್ರಯಾಣಿಸುತ್ತಿದ್ದ ಪೈಲಟ್ ತರಬೇತಿ ವಿಮಾನವು ಜು.13ರಂದು ಟೆಕ್ಸಾಸ್ ನ ನೈರುತ್ಯ ಫೋರ್ತ್ ವರ್ತ್ ನಿಂದ 45 ಕಿ.ಮೀ ದೂರವಿರುವ ತೋಲಾರ್ ಎಂಬ ಸಣ್ಣ ಪಟ್ಟಣದಲ್ಲಿ ಪತನವಾಗಿದೆ. ಪೈಲಟ್ ತರಬೇತುದಾರ ಅಮೆರಿಕನ್ ಪ್ರಜೆ ಕ್ಯಾಸೆ ಬ್ರೈನೇಗರ್ ಸಹ ಮೃತಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೃತ
ಕಾರ್ತಿಕ್ ಸಹ ಪೈಲಟ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದರು. ಆರ್ಲಿಂಗ್ಟನ್ ನ ಸ್ಕೈಮೇಟ್ಸ್ ಫ್ಲೈಟ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಚೆನ್ನೈನಲ್ಲಿ ದಂತ ವೈದ್ಯಕೀಯ ಕಲಿಯುತ್ತಿರುವ ಪ್ರತೀಕ್ ಸೋದರ ಕಾರ್ತಿಕ್ ನನ್ನು ಭೇಟಿ ಮಾಡಲು ಬಂದಿದ್ದರು. ಇನ್ನೆರಡು ದಿನಗಳಲ್ಲಿ ಅವರು ಭಾರತಕ್ಕೆ ಮರಳುವವರಿದ್ದರು ಎಂದು ಮೂಲಗಳು ತಿಳಿಸಿವೆ.











Click it and Unblock the Notifications