ಹೊಸೂರು ರಸ್ತೆ ಸಿಂಗಸಂದ್ರದಲ್ಲಿ ಎಟಿಎಂ ಕಣ್ಮರೆ
ಬೆಂಗಳೂರು,
ಜು.13: ಆನೇಕಲ್ ಹಾಗೂ ಉಡುಪಿಯ ಎಟಿಎಂ ಕಳುವು ಪ್ರಕರಣದ ನಂತರ ನಗರದ ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಎಟಿಎಂ ಕಳುವಾಗಿರುವ ಘಟನೆ ನಡೆದಿದೆ.ಮೊದಲೆಲ್ಲಾ ಎಟಿಎಂ ನಲ್ಲಿದ್ದ ಹಣ ಮಾತ್ರ ಕಸಿದುಕೊಂಡು ಹೋಗುತ್ತಿದ್ದ ಕಳ್ಳರು ಇತ್ತೀಚೆಗೆ ಹಣದ ಖಜಾನೆಯನ್ನೇ ಹೊತ್ತೊಯ್ಯುತ್ತಿರುವುದು ವಿಚಿತ್ರವಾಗಿದೆ. id="toptextpromo">ಸ್ಟೇಟ್
ಬ್ಯಾಂಕ್ ಆಫ್ ಪಟಿಯಾಲದ ಎಟಿಎಂ ಅನ್ನು ಕಳೆದ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತಪಡಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಟಿಎಂನಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಹಣ ಇತ್ತು ಎಂದು ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'>ಸ್ಟೇಟ್
ಬ್ಯಾಂಕ್ ಆಫ್ ಪಟಿಯಾಲಾ ಎಟಿಎಂ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಆದರೆ, ಎಟಿಎಂ ಅನ್ನು ಹೊತ್ತಿಕೊಂಡು ಹೋಗುವ ಮೊದಲು ಸಿಸಿಟಿವಿ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಯಾವುದೇ ಸುಳಿವು ಸಿಗದಂತೆ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯಕ್ಕೆ ಎಟಿಎಂ ಭದ್ರತಾ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣಾಧಿಕಾರಿ ಹೇಳಿದರು.











Click it and Unblock the Notifications