ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿ ಮಜ್ಜಗೆಗೆ ಸಿಕ್ತು ಉಪಲೋಕಾಯುಕ್ತ ಸ್ಥಾನ

By Mahesh
|
Google Oneindia Kannada News

SB Majjage is new Upa Lokayukta
ಬೆಂಗಳೂರು, ಜು.13: ಕಳೆದ ಆರು ತಿಂಗಳಿನಿಂದ ಖಾಲಿ ಯಿದ್ದಉಪ ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಎಸ್.ಬಿ.ಮಜ್ಜಗಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ದೆಹಲಿ ಪ್ರವಾಸದಲ್ಲಿರುವ ರಾಜ್ಯಪಾಲ ಎಚ್ ಭಾರಧ್ವಜ್ ಅವರು ಆದೇಶಕ್ಕೆ ಅಂಕಿತ ಹಾಕಿದ ನಂತರ, ಮಜ್ಜಗಿ ಅವರು ಕರ್ತವ್ಯ ವಹಿಸಿಕೊಳ್ಳಲಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಪತಿಪಕ್ಷಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಂದುವರೆದಿದ್ದು, ವಿಧಾನಮಂಡಲದ ಉಭಯ ಸದನಗಳು ಸ್ಥಗಿತಗೊಳಿಸಿ, ಸಿಬಿಐ ತನಿಖೆಗೆ ಆಗ್ರಹಿಸಿರುವ ಬೆನ್ನಲ್ಲೇ ಉಪ ಲೋಕಾಯುಕ್ತರ ನೇಮಕಕ್ಕೆ ಸರ್ಕಾರ ಒಮ್ಮತದ ಸಮ್ಮತಿ ನೀಡಿದೆ.

ಕೆಎಟಿ ಉಪಾಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿಎಸ್ ಬಿ ಮಜ್ಜಗೆ ಅವರ ನೇಮಕವನ್ನು ಸ್ವಾಗತಿಸಿರುವ ಲೋಕಾಯುಕ್ತ ಸಂತೋಷ್ ಹೆಗ್ದೆ, ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಹೋರಾಟಲು ಹೆಚ್ಚಿನ ಬಲ ಸಿಕ್ಕಂತಾಗಿದೆ ಎಂದರು.

ಉಪ ಲೋಕಾಯುಕ್ತರ ನೇಮಕ, ಪರಮಾಧಿಕಾರ ಸೇರಿದಂತೆ ಲೋಕಾಯುಕ್ತರಿಗೆ ಅಗತ್ಯವಿದ್ದ ಹೆಚ್ಚಿನ ಅಧಿಕಾರವನ್ನು ನೀಡುವತ್ತ ಸರ್ಕಾರ ತಡವಾಗಿಯಾದರೂ ಗಮನ ಹರಿಸಿದೆ. ಸರ್ಕಾರದ ಸಹಕಾರದ ಕೊರತೆಯ ಹಿನ್ನೆಲೆಯಲ್ಲಿ ಲೋಕಾಯುಕ್ತರು ರಾಜೀನಾಮೆ ನೀಡಿದ್ದರು.

ನಂತರ ಎಲ್ ಕೆಅಡ್ವಾಣಿ ಅವರ ಕೋರಿಕೆ ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ರಾಜೀನಾಮೆ ವಾಪಾಸ್ ಪಡೆದ ಮೇಲೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X