Get Updates
Get notified of breaking news, exclusive insights, and must-see stories!

ಕೇರಳ : ಬಲಗೈಯನ್ನೇ ಕತ್ತರಿಸಿದ ಮುಸ್ಲಿಮರು

Kerala Lecturer
ಕೊಚ್ಚಿ, ಜು. 6 : ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದರಿಂದ ಆಕ್ರೋಶಗೊಂಡ ಮುಸ್ಲಿಂ ಮೂಲಭೂತವಾದಿ ಸಂಘಟನೆ ಪಾಫುಲರ್ ಫ್ರಂಟ್ ಆಫ್ ಇಂಡಿಯಾದ ಇಬ್ಬರು ಸದಸ್ಯರು ಕಾಲೇಜು ಪ್ರಾಧ್ಯಾಪಕನ ಬಲಗೈಯನ್ನೇ ಕತ್ತರಿಸಿ ಹಾಕಿದ ಭೀಕರ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಮುವತ್ತುಪೂಜ್ ಎಂಬಲ್ಲಿ ನಡೆದಿದೆ.

ಜಾಫರ್, ಅಶ್ರಫ್ ಬಲಗೈ ಕತ್ತರಿಸಿದ ಮೂಲಭೂತವಾದಿಗಳು. ಟಿ ಜೆ ಜಾರ್ಜ್(52) ಕೈ ಕಳೆದುಕೊಂಡ ನತದೃಷ್ಟ ಪ್ರಾಧ್ಯಾಪಕ. ಕಳೆದ ಎಪ್ರಿಲ್ ನಲ್ಲಿ ಬಿಕಾಂ2 ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮೊಹ್ಮದ್ ರ ಹೆಸರನ್ನು ಬಳಿಸಿದ್ದು, ಕೈಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಪ್ರೆಯರ್ ಮುಗಿಸಿ ಚರ್ಚ್ ನಿಂದ ಜಾರ್ಜ್ ಮತ್ತು ಅವರ ಸಹೋದರಿ ಹೊರ ಬರುತ್ತಿದ್ದಂತೆಯೇ ದಾಳಿ ನಡೆಸಿ ಈ ದುಷ್ಕರ್ಮಿಗಳು ಅವರ ಬಲಗೈಯನ್ನು ಕತ್ತರಿಸಿ ಹಾಕಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 11 ಗಂಟೆಗಳ ಕಾಲ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಜಾರ್ಜ್ ಅವರ ಕೈಯನ್ನು ಮರುಜೋಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮೊಹ್ಮದ್ ರ ಹೆಸರನ್ನು ಉಲ್ಲೇಖಿಸಿದ್ದರಿಂದ ಪ್ರಾಧ್ಯಾಪಕ ಜಾರ್ಜ್ ಮುಸ್ಲಿಂ ಧರ್ಮದವರಿಂದ ತೀವ್ರ ಪ್ರತಿಭಟನೆ, ಬೆದರಿಕೆಗಳನ್ನು ಎದುರಿಸಬೇಕಾಗಿತ್ತು. ಇದೇ ಕಾರಣದಿಂದ ಅವರ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದ್ದರಿಂದ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಜಾರ್ಜ್ ಗೆ ಜೀವ ಬೆದರಿಕೆ ಕರೆಗಳು ನಿತ್ಯ ಬರುತ್ತಿದ್ದವು ಎಂದು ಮೂಲಗಳು ತಿಳಿಸಿವೆ.

ಕೆಲ ಮುಸ್ಲಿಂ ಸಂಘಟನೆಗಳು ಹಾಗೂ ಕ್ರಿಶ್ಚಿಯನ್ ಸಂಘಟನೆಗಳು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಧರಣಿ ನಡೆಸಿವೆ. ಕೇರಳ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ. ಕೇರಳವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+