ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಉಳಿತಾಯ ಖಾತೆಗೆ ಹೆಚ್ಚು ಬಡ್ಡಿ ಸಂಭವ

By Mahesh
|
Google Oneindia Kannada News

More interest on SB accounts likely
ನವದೆಹಲಿ, ಜು.4: ಉಳಿತಾಯ ಖಾತೆ(SB) ಹಾಗೂ ಠೇವಣಿಗಳಿಗೆ ಬ್ಯಾಂಕ್ ಗಳೇ ಬಡ್ಡಿ ದರಗಳನ್ನು ನಿಗದಿಪಡಿಸಿಕೊಳ್ಳಲು ರಿಸರ್ವ್ ಬ್ಯಾಂಕು ಒಲವು ತೋರಿದೆ. ಈಗ ಎರಡು ಲಕ್ಷ ರೂಪಾಯಿಗಳಿಗಿಂತ ಮೇಲ್ಪಟ್ಟಿರುವ ಉಳಿತಾಯ ಖಾತೆಗಳಿಗೆ ಬ್ಯಾಂಕ್ ಗಳೇ ಬಡ್ಡಿ ದರವನ್ನು ನಿಗದಿ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ.

ಎರಡು ಲಕ್ಷ ರೂಪಾಯಿಗಳ ಒಳಪಟ್ಟ ಖಾತೆಗಳಿಗೆ ರಿಸರ್ವ್ ಬ್ಯಾಂಕು ವಾರ್ಷಿಕ ಶೇ 3.5 ಬಡ್ಡಿ ದರ ನಿಗದಿಪಡಿಸಿದೆ. ಕಳೆದ ಏಪ್ರಿಲ್ ಒಂದರಿಂದ ಉಳಿತಾಯ ಖಾತೆಗಳಿಗೆ ದಿನದ ಆಧಾರದಲ್ಲಿ ಬಡ್ಡಿ ನೀಡಲು ರಿಸರ್ವ್ ಬ್ಯಾಂಕು ಆದೇಶ ನೀಡಿದೆ. ಈ ಮೊದಲು ಇದನ್ನು ತಿಂಗಳ ಲೆಕ್ಕದಲ್ಲಿ ನೀಡಲಾಗುತಿತ್ತು.

ಉಳಿತಾಯ ಹಾಗೂ ಠೇವಣಿಗಳ ಮೇಲಿನ ಬಡ್ಡಿ ನಿಗದಿ ಅಧಿಕಾರವನ್ನು ಬ್ಯಾಂಕ್ ಗಳಿಗೇ ನೀಡುವುದರಿಂದ ಈಗಾಗಲೇ ಹೆಚ್ಚು ಸ್ಪರ್ಧಾತ್ಮಕವಾಗಿರುವ ಬ್ಯಾಂಕಿಂಗ್ ಉದ್ಯಮ ಮತ್ತಷ್ಟು ಸ್ಪರ್ಧೆಗೆ ಸಾಕ್ಷಿಯಾಗಲಿದೆ, ಅಲ್ಲದೆ ಹೆಚ್ಚಿನ ಹಣದ ಹರಿವು ಆಗಲಿದೆ ಎಂದು ತಜ್ಞರು ಹೇಳುತ್ತಾರೆ. ಉಳಿತಾಯ ಖಾತೆ ಹಾಗೂ ಬ್ಯಾಂಕ್ ಠೇವಣಿಗಳು ಸಾರ್ವಜನಿಕರಿಗೆ ಆಕರ್ಷಕವಾಗಲಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X