ಬಿಬಿಎಂಪಿ : ಮೀನಾ ಔಟ್, ಸಿದ್ಧಯ್ಯ ಇನ್
ಬೆಂಗಳೂರು,
ಜು. 1 : ಬೃಹತ್ ಬೆಂಗಳೂರಿನ ಅಭಿವೃದ್ಧಿ ಉದ್ದೇಶದಿಂದ ಆಡಳಿತಕ್ಕೆ ಸರ್ಜರಿ ಮಾಡಿರುವ ರಾಜ್ಯ ಸರಕಾರ ಬಿಬಿಎಂಪಿ ಹಾಗೂ ಬಿಡಿಎಗೆ ಹೊಸ ಆಯುಕ್ತರನ್ನು ಬುಧವಾರ ನೇಮಕ ಮಾಡಿದೆ. id="toptextpromo">ಬಿಬಿಎಂಪಿ
ಆಯುಕ್ತರಾಗಿದ್ದ ಭರತ್ ಲಾಲ್ ಮೀನಾ ಅವರನ್ನು ಬಿಡಿಎ ಆಯುಕ್ತರನ್ನಾಗಿ ಮತ್ತು ಬಿಡಿಎ ಆಯುಕ್ತ ಸಿದ್ಧಯ್ಯ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರದ ಎರಡು ಪ್ರಮುಖ ಸಂಸ್ಥೆಗಳಾದ ಬಿಬಿಎಂಪಿ ಮತ್ತು ಬಿಡಿಎಗೆ ಯಡಿಯೂರಪ್ಪ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆಯೇ ಮೀನಾ ಮತ್ತು ಸಿದ್ಧಯ್ಯ ಅವರ ನೇಮಕ ಮಾಡಲಾಗಿತ್ತು. ಆದರೆ, ಮೀನಾ ಕಳೆದ ಎರಡು ತಿಂಗಳಿಂದ ಬಿಬಿಎಂಪಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಸರಕಾರಕ್ಕೆ
ಮೀನಾ ಅವರನ್ನು ಬಿಟ್ಟುಕೊಡುವ ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದ ಮೀನಾ ಅವರನ್ನು ಬಿಡಿಎಗೆ ವರ್ಗಾವಣೆ ಮಾಡಿದೆ. ಇಂಧನ ಇಲಾಖೆಗೆ ಶಮೀಮ್ ಬಾನು ಅವರನ್ನು ನೇಮಿಸಿದೆ. ಇದರ ಜೊತೆಗೆ ಎಂಟು ಐಪಿಎಸ್ ಅಧಿಕಾರಿಗಳಿಗೂ ಬಡ್ತಿ ನೀಡಿದೆ.











Click it and Unblock the Notifications