ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಸಿ ದೋಸೆಯಂತೆ ಭೈರಪ್ಪನವರ 'ಕವಲು' ಮಾರಾಟ
ಬೆಂಗಳೂರು, ಜೂ. 30 : 'ಆವರಣ'ದ ನಂತರ ಬಿಡುಗಡೆಯಾಗಿರುವ ಎಸ್ಎಲ್ ಭೈರಪ್ಪನವರ ಹೊಸ ಕಾದಂಬರಿ 'ಕವಲು' ನಿರೀಕ್ಷೆಯಂತೆ ಪುಸ್ತಕ ಲೋಕದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಓದುಗರು ಬಿಡುಗಡೆಯಾಗುತ್ತಿದ್ದಂತೆ ಕೊಳ್ಳಲು ಮುಗಿಬಿದ್ದಿದ್ದಾರೆ.
ಪುಸ್ತಕ ಜೂನ್ 28ರಂದು ಬಿಡುಗಡೆಯಾಗಿ ಮೂರು ದಿನಗಳಲ್ಲೇ ಮೂರು ಸಾವಿರದ ಏಳು ನೂರು ಕಾಪಿಗಳು ಬಿಸಿಬಿಸಿ ಮಸಾಲೆ ದೋಸೆಯಂತೆ ಮಾರಾಟವಾಗಿ ಹೋಗಿವೆ. ಕೆಲವೇ ದಿನಗಳಲ್ಲಿ ಎರಡನೇ ಮುದ್ರಣವೂ ಲಭ್ಯವಾಗಲಿದೆ ಎಂದು ಟೋಟಲ್ ಕನ್ನಡದ ವಿ ಲಕ್ಷ್ಮಿಕಾಂತ್ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
ಸಾಹಿತ್ಯ ಭಂಡಾರ ಪ್ರಕಟಿಸಿರುವ ಈ ಕಾದಂಬರಿಯ ಬೆಲೆ 250 ರು. ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಪುಸ್ತಕ ಖರೀದಿಸಬೇಕಿದ್ದರೆ ಟೋಟಲ್ ಕನ್ನಡ ಅಂತರ್ಜಾಲ ತಾಣವನ್ನು ಸಂಪರ್ಕಿಸಬಹುದು.
ಭೈರಪ್ಪನವರ ಹಿಂದಿನ ಕಾದಂಬರಿ ಆವರಣ ಸಾಹಿತ್ಯ ಲೋಕದಲ್ಲಿ ಭಾರೀ ಚರ್ಚೆಗೆ, ವಾದ-ವಿವಾದಗಳಿಗೆ, ಜಿಜ್ಞಾಸೆಗೆ ಕಾರಣವಾಗಿತ್ತು. ಈ ಕಾದಂಬರಿ ಕೂಡ ಅದೇ ಬಗೆಯ ಸಂಚಲನ ಸೃಷ್ಟಿ ಮಾಡಿದರೂ ಆಶ್ಚರ್ಯವಿಲ್ಲ.
Comments
Story first published: Wednesday, June 30, 2010, 14:19 [IST]