ಮಗಳ ಕತ್ತಲ್ಲಿ ಸ್ಕ್ರೂಡ್ರೈವರ್ ತುರುಕಿದ ನಿರ್ದಯಿ ಅಪ್ಪ

ಕ್ಯಾಸ್ಟ್ರೋವಿಗೆ ಭಾರೀ ಫುಟ್ಬಾಲ್ ಹುಚ್ಚು. ಎರಡು ವರ್ಷದ ಪುಟ್ಟ ಮಗು ಆಗ ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿ ಫುಟ್ಬಾಲ್ ವೀಕ್ಷಣೆಗೆ ಅಡ್ಡಿಪಡಿಸಿದೆ. ಮಗುವಿನ ಅಳುವನ್ನು ಸಹಿಸದ ಅಪ್ಪ ಮೈಮೂಳೆ ಮುರುಯುವಂತೆ ಹೊಡೆದಿದ್ದಾನೆ. ಸಾಲದೆಂಬಂತೆ ಕತ್ತಿನಲ್ಲಿ ಸ್ಕ್ರೂಡ್ರೈವರ್ ತುರುಕಿ ಶಾಶ್ವತವಾಗಿ ಪುಟ್ಟಮಗುವಿನ ಅಳುವನ್ನು ನಿಲ್ಲಿಸಿದ್ದಾನೆ.
ನಂತರ, ಅಕಸ್ಮಾತಾಗಿ ಸ್ಕ್ರೂಡ್ರೈವರ್ ಆಕೆಯ ಕತ್ತಲ್ಲಿ ಹೊಕ್ಕಿದೆ ಎಂಬಂತೆ ನಾಟಕವಾಡಿದ್ದಾನೆ. ಕೂಡಲೆ ಮಗುವಿನ ರಕ್ಷಣೆಗೆ ಫೈರ್ ಫೈಟರ್ಸ್ ಮತ್ತು ತುರ್ತು ವೈದ್ಯಕೀಯ ಚಿಕಿತ್ಸಾ ತಂಡ ಅಲ್ಲಿ ಧಾವಿಸಿದೆ. ಆತನ ಮೇಲೆಯೇ ಸಂಶಯ ಬಂದು ವಿಚಾರಣೆ ನಡೆಸಲಾಗಿ ಮಗುವನ್ನು ಹತ್ಯೆಗೈದಿದ್ದಾಗಿ ಹೆಕ್ಟರ್ ಕ್ಯಾಸ್ಟ್ರೋ ಒಪ್ಪಿಕೊಂಡಿದ್ದಾನೆ ಎಂದು ದಿ ಮಾನಿಟರ್ ಪತ್ರಿಕೆ ವರದಿ ಮಾಡಿದೆ.
ಫುಟ್ಬಾಲ್ ನೋಡುವಾಗ ಅತ್ತದ್ದೇ ಆ ಮಗು ಮಾಡಿದ ದೊಡ್ಡ ತಪ್ಪೆ? ಫುಟ್ಬಾಲ್ ಪ್ರೇಮ ಒಂದು ಮುಗ್ಧ ಮಗುವಿನ ಜೀವವನ್ನೇ ಬಲಿತೆಗೆದುಕೊಂಡಿದೆ.












Click it and Unblock the Notifications