ಕೆಎಂಎಫ್ ಗೆ ಸದಾನಂದ ಗೌಡ ರಾಜೀನಾಮೆ
ಬೆಂಗಳೂರು,
ಜೂ.28 : ಸಂಸದರೂ ಆಗಿರುವ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದ ಗೌಡ ಕರ್ನಾಟಕ ಹಾಲು ಮಹಾಮಂಡಲದ ( ಕೆ ಎಂ ಎಫ್) ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನದ ಕಿಡಿ ಕಾಣಿಸಿಕೊಂಡಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎನ್ನುವುದೇ ರಾಜೀನಾಮೆಗೆ ಕಾರಣ ಎನ್ನಲಾಗಿದೆ. id="toptextpromo">ಸದಾನಂದ
ಗೌಡ ತನ್ನ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರವಾನಿಸಿದ್ದು ಅವರ ರಾಜೀನಾಮೆ ಇನ್ನೂ ಆಂಗೀಕಾರವಾಗಬೇಕಷ್ಟೇ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಸಿಎಂ ಭರವಸೆ ನೀಡಿದ್ದರು. ಎಂಟು ತಿಂಗಳಾದರೂ ಭರವಸೆ ಈಡೇರದ ಕಾರಣ ಬೇಸರಗೊಂಡ ಗೌಡರು ತನ್ನ ಸ್ಥಾನಕ್ಕೆ ರಾಜೀನಾಮೆ ನೀದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೆಎಂಎಫ್
ಹಾಲಿ ಅಧ್ಯಕ್ಷ ಸೋಮಶೇಖರ ರೆಡ್ಡಿ ಮೂರು ತಿಂಗಳವರೆಗೆ ಮಾತ್ರ ಈ ಸ್ಥಾನ ಅಲಂಕರಿಸಲಿದ್ದು ನಂತರ ಈ ಹುದ್ದೆಗೆ ಸದಾನಂದ ಗೌಡ ಅವರನ್ನು ನೇಮಕ ಮಾಡಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ರೆಡ್ಡಿ ನಿರಾಕರಿಸಿ ಪೂರ್ಣಾವಧಿಗೆ ತಾನೇ ಕೆಎಂಎಫ್ ಅಧ್ಯಕ್ಷ ಎಂದು ಹಠ ಹಿಡಿದ ಹಿನ್ನೆಲೆಯಲ್ಲಿ ಸದಾನಂದ ಗೌಡ ರಾಜೀನಾಮೆ ನೀಡಿದ್ದಾರೆ.











Click it and Unblock the Notifications