ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷೆಯಂತೆ ನಡೆದ ಜರ್ಮನಿ, ಘಾನಾ ಆಟ

By Mahesh
|
Google Oneindia Kannada News

ಜೋಹಾನ್ಸ್ ಬರ್ಗ್/ ನೆಲ್ ಫ್ರೂಟ್, ಜೂ.24: 16 ರ ಹಂತಕ್ಕೆ ಸೇರುವ ಆಸ್ಟ್ರೇಲಿಯಾದ ಕನಸು ಭಗ್ನಗೊಂಡಿದೆ. ನಾಕೌಟ್ ಹಂತ ತಲುಪಲು ಸೆರ್ಬಿಯಾ ವಿರುದ್ಧ ಭರ್ಜರಿ ಜಯ ಗಳಿಸಬೇಕಿದ್ದ ಆಸೀಸ್, 2-1 ಅಂತರ ಜಯಕ್ಕೆ ತೃಪ್ತಿಪಟ್ಟಿದೆ. ಡಿ ಗುಂಪಿನಲ್ಲಿ ನಿರೀಕ್ಷೆಯಂತೆ ಜರ್ಮನಿ ಹಾಗೂ ಘಾನಾ ಮುಂದಿನ ಹಂತ ತಲುಪಿವೆ.

ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆದ್ದು, ಒಂದು ಸೋತು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡ 4 ಅಂಕಗಳನ್ನು ಮಾತ್ರ ಗಳಿಸಿತ್ತು. ಘಾನಾ ಕೂಡಾ ಅಷ್ಟೇ ಅಂಕಗಳನ್ನು ಪಡೆದಿದ್ದರೂ ಗೋಲುಗಳ ಸರಾದರಿ ಅಂತರದಲ್ಲಿ ಮುಂದಿದ್ದರಿಂದ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ 'ಡಿ 'ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ನಾಕೌಟ್ ಹಂತ ತಲುಪಿತು.

ವಿಡಿಯೋಗಳು :
ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ಜರ್ಮನ್ನರು ಕ್ಲೋಸ್ ಇಲ್ಲದೆ ಕೂಡಾ 16 ರ ಹಂತ ತಲುಪುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಯುವ ಆಟಗಾರ ಓಜೈಲ್ ಹೊಡೆದ ಏಕೈಕ ಗೋಲಿನಿಂದ ಘಾನಾವನ್ನು ಮಣಿಸಿದ್ದು, ಜರ್ಮನ್ ಸಾಮರ್ಥ್ಯಕ್ಕೆ ತಕ್ಕದಾದ ಆಟವಲ್ಲ ಎಂದು ಫುಟ್ಬಾಲ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಫೀಫಾ ವಿಶ್ವಕಪ್ 2010 :
ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಒಂದು ವೇಳೆ ಘಾನಾ ವಿರುದ್ಧ ಜರ್ಮನ್ನರು ಅಧಿಕ ಗೋಲು ಗಳಿಸಿದ್ದರೂ ಆಸ್ಟ್ರೇಲಿಯಾಗೆ ಅವಕಾಶ ಲಭಿಸುತ್ತಿತ್ತು. 16 ರ ಹಂತದಲ್ಲಿ ಜರ್ಮನಿ , ಇಂಗ್ಲೆಂಡ್ ಅನ್ನು, ಘಾನಾ ಯುಎಸ್ ಎ ಅನ್ನು ಎದುರಿಸಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X