ವ್ಯಂಗ್ಯ ಚಿತ್ರಕಾರ ಕನ್ನಡಿಗ ಆರ್ ಕೆ ಲಕ್ಷ್ಮಣ್ ತೀವ್ರ ಅಸ್ವಸ್ಥ
ಮುಂಬೈ,
ಜೂ.22: ಖ್ಯಾತ ವ್ಯಂಗಚಿತ್ರಕಾರ, ಕನ್ನಡಿಗ ಆರ್ ಕೆ ಲಕ್ಷ್ಮಣ್ ಆರೋಗ್ಯ ಪರಿಸ್ಥಿತಿಯಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಪಾರ್ಶ್ವ ವಾಯು ಆಘಾತಕ್ಕೆ ಒಳಗಾಗಿದ್ದ ಅವರನ್ನು ಪುಣೆಯಿಂದ ಮುಂಬೈಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಣ್ ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. id="toptextpromo">ಪುಣೆಯ
ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮತ್ತೆ 2 ಬಾರಿ ಆಘಾತವಾಗಿದ್ದರಿಂದ ಸೋಮವಾರ ಸಂಜೆ ವಿಮಾನದಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆತರಲಾಗಿದೆ. ಲಕ್ಷ್ಮಣ್ ಈಗ ತೀವ್ರ ನಿಗಾ ಘಟಕದಲ್ಲಿದ್ದು ಅವರ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>"ಇಂದು
ಬೆಳಗ್ಗೆ ತೀವ್ರವಾಗಿದ್ದ ಜ್ವರ ಪುನಃ ಕಡಿಮೆಯಾಯಿತು. ತೀವ್ರ ನಿಗಾ ಘಟಕದಿಂದ ಅವರು ಬೇಗನೆ ಹೊರಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ" ಎಂದು ಲಕ್ಷ್ಮಣ್ ಅವರ ಸೊಸೆ ಉಷಾ ಲಕ್ಷ್ಮಣ್ ತಿಳಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬಲ ಪಾರ್ಶ್ವವಾಯು ಆಘಾತಕ್ಕೆ ಲಕ್ಷ್ಮಣ್ ಒಳಗಾಗಿದ್ದರು. ಈ ಆಘಾತ ಅವರ ಎಡ ಮೆದುಳನ್ನು ಘಾಸಿಗೊಳಿಸಿತ್ತು.











Click it and Unblock the Notifications