ಹಾಲಿ ಚಾಂಪಿಯನ್ನರ ಕಟ್ಟಿಹಾಕಿದ ಕಿವೀಸ್

ಇದರಿಂದಾಗಿ ಟೂರ್ನಿಯಿಂದ ಹೊರಬೀಳುವ ಅಪಾಯವನ್ನು ಮಾರ್ಸೆಲೊ ಲಿಪ್ಪಿ ಪಡೆ ಎದುರಿಸುತ್ತಿದೆ. ಪಂದ್ಯದ ಆರಂಭದಲ್ಲಿಯೇ ನ್ಯೂಜಿಲೆಂಡ್ ಇಟಲಿ ಮೇಲೆ ಆಕ್ರಮಣ ಮಾಡಿತು. 7ನೇ ನಿಮಿಷದಲ್ಲಿ ನ್ಯೂಜಿಲೆಂಡ್‌ನ ಶೇನ್ ಸ್ಮೆಲ್ಟ್ಜ್ ದೂರದಿಂದ ಒದ್ದ ಚೆಂಡು ಇಟಲಿಯ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಪೆಟ್ಟಿಗೆಯೊಳಗೆ ನುಸುಳಿತು.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ
ಇಟಲಿ 29ನೇ ನಿಮಿಷದಲ್ಲಿ ನ್ಯೂಜಿಲೆಂಡ್ ಜೊತೆ ಸಮಬಲ ಸಾಧಿಸಿತು. ವಿಶ್ವ ಚಾಂಪಿಯನ್ನರ ಪರ ವಿನ್ಸೆಂಜೋ ಲಾಕ್ವಿಂಟಾ ಪೆನಾಲ್ಟಿ ಮೂಲಕ ಗೋಲು ಬಾರಿಸಿ ಅಂತರವನ್ನು ಸಮ ಮಾಡಿದರು.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
ಆದರೆ ಆ ಬಳಿಕ ಉಭಯ ತಂಡಗಳು ವಿನ್ನಿಂಗ್ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ. ಕೀಪರ್ ಗೀಯಾನ್ ಲುಗ್ಗಿ ಬಫನ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಳಿದ ಇಟಲಿ, ಪಂದ್ಯದ ಯಾವ ಹಂತದಲ್ಲೂ ಚಾಂಪಿಯನ್ನರ ಆಟವಾಡಲಿಲಿಲ್ಲ. ಮೊದಲ ಪಂದ್ಯದಲ್ಲೂ ಪರುಗ್ವೆ ವಿರುದ್ಧ ಡ್ರಾ ಸಾಧಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದ ಇಟಲಿ, ಮುಂದಿನ ಪಂದ್ಯದಲ್ಲಿ ಸ್ಲೊವಾಕಿಯಾ ವಿರುದ್ಧ ಗೆಲ್ಲಲ್ಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಸ್ಲೋವಾಕಿಯಾ ವಿರುದ್ಧ ಡ್ರಾ ಸಾಧಿಸಿದ್ದ ನ್ಯೂಜಿಲ್ಯಾಂಡ್, ಜೂ.24 ರಂದು ಬಲಿಷ್ಠ ಪರುಗ್ವೆ ವಿರುದ್ಧ ಪಂದ್ಯವನ್ನು ಗೆದ್ದರೆ, 16 ರ ಹಂತ ತಲುಪುವ ಎಲ್ಲಾ ಸಾಧ್ಯತೆಗಳಿವೆ.












Click it and Unblock the Notifications