ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಡನ್ ಲಪ್ ಘಟಕ ಮೇಲ್ದರ್ಜೆಗೆ

By Mahesh
|
Google Oneindia Kannada News

Dunlop expands Mysore unit
ಮೈಸೂರು, ಜೂ.18: ಡನ್ ಲಪ್ ಇಂಡಿಯಾ ಲಿಮಿಟೆಡ್ ತನ್ನ ಅಂಗ ಕಂಪೆನಿ ಫಾಲ್ಕನ್ ಟೈಯರ್ಸ್ ನ ಮೂಲಕ ಉತ್ತರಾಂಚಲದಲ್ಲಿ ಹೊಸ ಟೈರ್ ತಯಾರಿಕಾ ಘಟಕ ಹಾಗೂ ಮೈಸೂರಿನ ಘಟಕವನ್ನು 300 ಕೋಟಿ ರುಪಾಯಿ ವೆಚ್ಚದಲ್ಲಿ ಉನ್ನತೀಕರಿಸಲಿದೆ ಎಂದು ರುಯಾ ಸಮೂಹದ ಅದ್ಯಕ್ಷ ಪವನ್ ಕುಮಾರ್ ರುಯಾ ಹೇಳಿದ್ದಾರೆ.

ಡನ್ ಲಪ್ ಇಂಡಿಯಾದ 83ನೇ ವಾರ್ಷಿಕ ಮಹಾಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಉತ್ತರಾಂಚಲದ ಘಟಕಕ್ಕೆ 550 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಾಗುವುದು ಎಂದರು. ಉತ್ತರಾಂಚಲದ ನೂತನ ಘಟಕ ಹಾಗೂ ಮೈಸೂರಿನ ಘಟಕದ ಉನ್ನತೀಕರಣದಿಂದ ಕಂಪೆನಿಯ ದ್ವಿಚಕ್ರ ಹಾಗೂ ತ್ರಿಚಕ್ರ ಟೈರ್ ಗಳ ಉತ್ಪಾದನೆ ತಿಂಗಳಿಗೆ 1.5 ಲಕ್ಷ ದಿಂದ 2.3 ಲಕ್ಷ ಘಟಕಗಳಿಗೇರಲಿದೆ ಎಂದರು.

ಇದರಿಂದ ಜಾಗತಿಕಮಟ್ಟದಲ್ಲಿ ಕಂಪೆನಿ ಪ್ರಮುಖ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಟೈರ್ ತಯಾರಕನಗಿ ಹೊರಹೊಮ್ಮಲಿದೆ ಎಂದರು ಕಂಪೆನಿಯ ಬಹುತೇಕ ಉತ್ಪಾದನೆಯನ್ನು ಹೀರೋ ಹೋಂಡಾ ಗೆ ಸರಬರಾಜು ಮಾಡಲಾಗುತ್ತಿದೆ ಎಂದ ಅವರು 850 ಕೋಟಿ ರುಪಾಯಿಗಳ ಕ್ರೋಢೀಕರಣವನ್ನು ಹಕ್ಕಿನ ಷೇರು ಮಾರಾಟ ಹಾಗೂ ಹಣಕಾಸು ಸಂಸ್ಥೆಗಳಿಂದ ಮಾಡಲಾಗುವುದು ಎಂದರು.

ಕಂಪೆನಿಯ ಸಹಗಂಜ್ ಹಾಗೂ ಅಂಬತ್ತೂರಿನಲ್ಲಿ ಉತ್ಪಾದನೆ ತಿಂಗಳಿಗೆ 30-40 ಟನ್ ಗಳಿಗೇರಿದೆ ಎಂದ ಅವರು ಇದನ್ನು 60-70 ಟನ್ ಗಳಿಗೇರಿಸಲು ಪ್ರಯತ್ನ ನಡೆಸಲಾಗಿದೆ ಎಂದರು. ಸಹಗಂಜ್ ಘಟಕದಲ್ಲಿ 50 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನೂ ಕಂಪೆನಿ ಸ್ಥಾಪಿಸಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X