ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಬಿಗಳ ಪೊಲೀಸರ ಕಿತ್ತಾಟ ರಂಪ ರಾಮಾಯಣ

By Mahesh
|
Google Oneindia Kannada News

Police clash with Cabbies
ಹೆಬ್ಬಗೋಡಿ, ಜೂ.17: ಬೆಂಗಳೂರಿನ ಮಡಿವಾಳ ಟ್ರಾಫಿಕ್ ಪೊಲೀಸ್ ಮತ್ತು ಟ್ಯಾಕ್ಸಿ ಚಾಲಕನ ನಡುವೆ ನಡೆದ ಮಾರಾಮಾರಿಯಿಂದ ಟ್ಯಾಕ್ಸಿ ಚಾಲಕನೊಬ್ಬ ತೀವ್ರ ಗಾಯಗೊಂಡಿದ್ದು, ರೊಚ್ಚಿಗೆದ್ದ ಟ್ಯಾಕ್ಸಿ ಚಾಲಕರು, ಬುಧವಾರ ಚನ್ನಕೇಶವ ವೃತ್ತ(ನಾಗನಾಥಪುರ ಬಳಿ)ದಲ್ಲಿ ಹೆದ್ದಾರಿ ತಡೆ ನಡೆಸಿ, ಸ್ಥಳಕ್ಕೆ ಬಂದ ಕೆಲ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಆಕ್ರೋಶಗೊಂಡ ಟ್ಯಾಕ್ಸಿ ಚಾಲಕರು ಎಲ್ಲೆಂದರಲ್ಲಿ ಟಯರ್‌ಗಳಿಗೆ ಬೆಂಕಿ ಹಾಕಿ ರಸ್ತೆ ತಡೆ ನಡೆಸಿದರು. ಪೊಲೀಸರ ವಿರುದ್ದ ಘೋಷಣೆ ಹಾಕಿದರು.

ಘಟನೆ ಹಿನ್ನೆಲೆ: ಮಡಿವಾಳ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಬಳಿ ಟಾಟಾ ಸುಮೋ ಚಾಲಕ ನಾಗರಾಜ ಎಂಬಾತ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಂದಿದ್ದಾನೆ. ಆಗ ಆ ಸ್ಥಳದಲ್ಲಿದ್ದ ಮಡಿವಾಳ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಲಕ್ಷ್ಮೀ ನರಸೇಗೌಡ ಮತ್ತು ಚಾಲಕ ನಾಗರಾಜನ ನಡುವೆ ವಾಗ್ವಾದ ನಡೆದು ಅದು ವಿಕೋಪಕ್ಕೆ ತಿರುಗಿದೆ.

ಟ್ಯಾಕ್ಸಿ ಚಾಲಕ ತನ್ನ ಸುಮೋವನ್ನು ಚನ್ನಕೇಶವ ನಗರಕ್ಕೆ ವೇಗವಾಗಿ ತಂದಿದ್ದಾನೆ. ಆಕ್ರೋಶಗೊಂಡ ಪೊಲೀಸ್ ಆತನನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ. ಇದರಿಂದ ಚಾಲಕ ನಾಗರಾಜು ಗಾಯಗೊಂಡಿದ್ದಾನೆ. ಈ ಸುದ್ದಿ ಹರಡುತ್ತಿದ್ದಂತೆ ನೂರಾರು ಚಾಲಕರು ಗಲಾಟೆ ಎಬ್ಬಿಸಿದ್ದಾರೆ.

ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಬ್‌ಇನ್ಸ್ ಪೆಕ್ಟರ್ ಬಾಲಕೃಷ್ಣ ಎಂಬುವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಅವರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮಡಿವಾಳ ಠಾಣೆ ಎಸಿಪಿ, ಲೋಕೇಶ್, ಘಟನೆಗೆ ಕಾರಣನಾದ ಹೆಡ್‌ಕಾನ್ಸ್ ಟೇಬಲ್ ಲಕ್ಷ್ಮೀನರಸೇಗೌಡನ ಅಮಾನತಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.ಈ ಘಟನೆಯಿಂದ ಎಲೆಕ್ಟ್ರಾನಿ ಕ್ ಟೆಕ್ಕಿಗಳು ಸೇರಿದಂತೆ ಸಾರ್ವಜನಿಕರು ಕೊಂಚ ತಡವಾಗಿ ಮನೆ ತಲುಪಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X