ವಿಮಾನ ಪ್ರಯಾಣ ದರ ಇನ್ನಷ್ಟು ದುಬಾರಿ

ಇದರಿಂದಾಗಿ ವಿಮಾನ ಪ್ರಯಾಣ ದರ ಏರಿಕೆಯಾಗುವುದು ಖಚಿತವಾಗಿದೆ. ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ದರದಲ್ಲಿ ಭಾರಿ ಏರಿಕೆಯಾಗಲಿದೆ.
ಪ್ರತೀ ಕಿಲೋ ಲೀಟರ್‌ಗೆ 688 ರೂಪಾಯಿ ಏರಿಕೆಯಾಗಿ, 40,192 ರೂಪಾಯಿ ತಲುಪಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಕಟಣೆ ಹೊರಡಿಸಿದೆ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಶೇ.7.17 ರಷ್ಟು ಇಳಿಕೆ ಕಂಡಿದ್ದ ಎಟಿಎಫ್ ದರ ನಂತರ ಇದೇ ಮೊದಲ ಬಾರಿಗೆ ಗರಿಷ್ಠ ಏರಿಕೆ ದಾಖಲಿಸಿದೆ.
ಮುಂಬೈ ನಲ್ಲಿ ಮಂಗಳವಾರದಿಂದ ಅನ್ವಯವಾಗುವಂತೆಯೇ ಎಟಿಎಫ್ ದರದಲ್ಲಿ 717 ರುಪಾಯಿಗಳಷ್ಟು ಏರಿಕೆಯಾಗಿ 41,469 ರುಪಾಯಿ ತಲುಪಲಿದೆ.












Click it and Unblock the Notifications