ವಿಜಯ nextಗೆ ನೆಕ್ಸ್ಟ್ ಸಂಪಾದಕ ಯಾರು?
ಬೆಂಗಳೂರು,
ಜೂ. 15 : ಭಾರೀ ನಿರೀಕ್ಷೆಗಳೊಂದಿಗೆ ಹೈಸೊಸೈಟಿ ಕನ್ನಡಿಗರಿಗಾಗಿಯೇ ಹುಟ್ಟಿಕೊಂಡಿದ್ದ ದಿ ಟೈಮ್ಸ್ ಆಪ್ ಇಂಡಿಯಾ ಗ್ರೂಪ್ ನ ರಂಗುರಂಗಿನ ವಿಜಯ next ಕನ್ನಡ ವಾರ ಪತ್ರಿಕೆಯ ಸಂಪಾದಕ ಮೂರೇ ವಾರಗಳಲ್ಲಿ ಕುರ್ಚಿ ಖಾಲಿ ಮಾಡಿದ್ದಾರೆ. id="toptextpromo">ವಿಜಯ
next ಪತ್ರಿಕೆಯ ಪ್ರಥಮ ಸಂಪಾದಕ ದೀಪಕ್ ತಿಮ್ಮಯ್ಯ ರಾಜೀನಾಮೆ ಸಲ್ಲಿಸಿದ್ದು, ಅವರನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಮೇ 28ರಂದು ಓದುಗರ ಕೈಸೇರಿದ ಮರುದಿನವೇ ಸಂಪಾದಕರು ರಾಜೀನಾಮೆಯನ್ನು ಬಿಸಾಕಿದ್ದಾರೆ. ಮೊಟ್ಟಮೊದಲ ದಿನದಿಂದಲೇ ಅಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬುದಕ್ಕೆ ತಿಮ್ಮಯ್ಯ ಅವರ ರಾಜೀನಾಮೆ ಕನ್ನಡಿ ಹಿಡಿದಿದೆ. id='are-slot-1' class='oiad oi-axt oiadv'> id='top-searched-articles'>ಉದಯ
ಟಿವಿಯಲ್ಲಿ ಸಂದರ್ಶನ ಮಾಡಿಕೊಂಡಿದ್ದ ಬಹುಮುಖ ವ್ಯಕ್ತಿತ್ವದ ದೀಪಕ್ ತಿಮ್ಮಯ್ಯ ಹೊಸ ಮಾಧ್ಯಮಕ್ಕೆ ಹೊಂದಿಕೊಳ್ಳದೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಸರಿ ತಪ್ಪುಗಳ ವಿಶ್ಲೇಷಣೆಯಲ್ಲಿ ತೊಡಗಿರುವ ಆಡಳಿತ ಮಂಡಳಿ ಈ ವಿವಾದದ ಬಗ್ಗೆ ತುಟಿ ಮುಚ್ಚಿಕೊಂಡಿದೆ. 24 ಪುಟಗಳ ಬಣ್ಣಬಣ್ಣದ ಪತ್ರಿಕೆ ಮಾತ್ರ ಹೊಸ ಸಂಪಾದಕರ ಹುಡುಕಾಟದಲ್ಲಿದೆ. (ಸುದ್ದಿ ಮೂಲ : ಸ್ಯಾನ್ಸ್ ಸರೀಫ್ ಬ್ಲಾಗ್)











Click it and Unblock the Notifications