ನಕ್ಸಲ್ ಪದ್ಮನಾಭ ಸೆರೆಯಾಗಿಲ್ಲ : ಆಚಾರ್ಯ

VS Acharya
ಬೆಂಗಳೂರು, ಜೂ.15: ಪ್ರಮುಖ ನಕ್ಸಲ್ ಮುಖಂಡ ನೀಲಗುಳಿ ಪದ್ಮನಾಭನನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯನ್ನು ರಾಜ್ಯ ಗೃಹ ಸಚಿವ ವಿಎಸ್ ಆಚಾರ್ಯ ಅಲ್ಲಗೆಳೆದಿದ್ದಾರೆ. ನೀಲಗುಳಿ ಪದ್ಮನಾಭನನ್ನು ಇನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸರಿಗೆ ನೀಲಗುಳಿ ಪದ್ಮನಾಭನ ಚಲನವಲನ ಕುರಿತು ಮಾಹಿತಿ ಸಿಕ್ಕ್ಕಿರುವುದು ನಿಜ. ಆದರೆ, ಆತನ ಬಂಧನವಾಗಿಲ್ಲ ಎಂದು ಸೋಮವಾರ ಸುದ್ದಿಗಾರ ತಿಳಿಸಿದರು. ಪದ್ಮನಾಭನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು, ಬೆಂಗಳೂರಿನಲ್ಲಿ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

2005 ರಲ್ಲಿ ಕಳಸದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ ಕೌಂಟರ್ ಆದ ಮೇಲೆ ನೀಲಗುಳಿ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದನು. ಆತನ ತಲೆ ಮೇಲೆ 5ಲಕ್ಷ ರು ಇನಾಮು ಘೋಷಿಸಲಾಗಿತ್ತು.ಪಶ್ಚಿಮಘಟ್ಟದಲ್ಲಿ ಸುಮಾರು ಹತ್ತು ವರ್ಷಗಳಿಂದ ಮಾವೋವಾದಿ ಸಂಘಟನೆಯ ಮುಂದಾಳತ್ವವನ್ನು ಪದ್ಮನಾಭ ವಹಿಸಿದ್ದನು.

ಆಂಧ್ರಪ್ರದೇಶದ ಪೊಲೀಸರು ಬಂಧಿಸಿರುವ ಚಂದ್ರಶೇಖರ ಗೊರಬಾಳ ವಿಚಾರಣೆ ಜಾರಿಯಲ್ಲಿದ್ದು, ಮತ್ತೊಬ್ಬ ಪ್ರಮುಖ ನಕ್ಸಲ್ ನಾಯಕನ ಬಗ್ಗೆ ಮಾಹಿತಿ ನೀಡಿದ್ದಾನೆ. ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಆಚಾರ್ಯ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+