ಮೈಸೂರು ನಾಗನಹಳ್ಳಿ ಬಳಿ ಟಿಪ್ಪರ್ ಗೆ ರೈಲು ಡಿಕ್ಕಿ

ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಸಂಪೂರ್ಣವಾಗಿ ಜಖಂ ಆಗಿದೆ. ರೈಲ್ವೆ ಎಂಜಿನ್ ಹಾಗೂ ಮುಂಭಾಗದ ಎರಡು ಬೋಗಿಗಳು ಹಳಿ ತಪ್ಪಿವೆ. ಆದರೆ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನಾಗನಹಳ್ಳಿ ಬಳಿಯ 131ನೇ ಮಾನವರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಟಿಪ್ಪರ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಆಗಮಿಸಿದ್ದಾರೆ.
ಯಶವಂತಪುರ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಕಾರಣ ಮೈಸೂರು ಬೆಂಗಳೂರು ನಡುವಿನ ರೈಲುಗಳ ಓಡಾಟಕ್ಕೆ ಅಡಚಣೆ ಉಂಟಾಗಿದೆ ಎಂದು ರೈಲ್ವೆ ಸಬ್ ಇನ್ಸ್ ಪೆಕ್ಟರ್ ಈರಪ್ಪ ತಿಳಿಸಿದ್ದಾರೆ. ಟಿಪ್ಪರ್ ನಲ್ಲಿ ಮಣ್ಣು ತುಂಬಿಕೊಂಡು ಬರಲಾಗುತ್ತಿತ್ತ್ತು. ಇಲ್ಲಿ ರೈಲ್ವೆ ಗೇಟ್ ಇಲ್ಲದೆ ಇರುವುದು ಈ ದುರಂತಕ್ಕೆ ಮತ್ತೊಂದು ಕಾರಣವಾಗಿದೆ.












Click it and Unblock the Notifications