ರಾಜ್ಯದಲ್ಲಿ ಗುಡುಗು ಸಮೇತ ಮಾಯದಂತ ಮಳೆ

Madikeri
ಬೆಂಗಳೂರು, ಜೂ.12: ರಾಜ್ಯದಲ್ಲಿ ಮುಂಗಾರು ಮಳೆ ಬಲಗಾಲಿಟ್ಟು ಒಳಗೆ ಅಡಿಯಿಟ್ಟಿದೆ. ಶನಿವಾರ ಹವಾಮಾನ ಇಲಾಖೆ ಮುಂಗಾರು ಮಳೆ ಬಗ್ಗೆ ಬಿಸಿಬಿಸಿ ವರ್ತಮಾನ ನೀಡಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದೆ.

ಕರ್ನಾಟಕದ ಕರಾವಳಿ ತೀರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯ ಕಣ್ಣಾಮುಚ್ಚಾಲೆ ಶುರುವಾಗಿದೆ. ಮುಲ್ಕಿಯಲ್ಲಿ 11 ಸೆಂ.ಮೀನಷ್ಟು ದಾಖಲೆ ಮಳೆ ಸುರಿದಿದೆ. ಮಂಗಳೂರು, ಕೋಟಾ, ಜಮಖಂಡಿ, ಯದ್ರಾಮಿ, ರಾಯಚೂರು, ಸಿಂಧನೂರಿನಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.

ಪಣಂಬೂರು, ಕುಂದಾಪುರ, ಚಿಕ್ಕೋಡಿ, ದೇವರಿಪ್ಪರಗಿಯಲ್ಲಿ ತಲಾ 3 ಸೆಂ.ಮೀ ಮಳೆ ದಾಖಲಾಗಿದೆ. ಸುಬ್ರಹ್ಮಣ್ಯ, ಹುಕ್ಕೇರಿ, ಸಂಕೇಶ್ವರ, ಹಾನಗಲ್, ಬೇವೂರು, ಬಸವನ ಬಾಗೇವಾಡಿ, ನಾರಾಯಣಪುರ, ಭಾಗಮಂಡಲ, ವಿರಾಜಪೇಟೆ ತಲಾ 2 ಸೆಂ.ಮೀ ಮಳೆಯನ್ನು ಸ್ವಾಗತಿಸಿದೆ.

ಮುಡಬಿದರೆ, ಪುತ್ತೂರು, ಕಾರ್ಕಳ, ಭಟ್ಕಳ, ಗೋಕಾಕ್, ಬಾಗಲಕೋಟೆ, ರಬಕವಿ, ಬಿಜಾಪುರ, ಗುಲ್ಬರ್ಗ, ಶಹಾಪುರ, ಕೊಟ್ಟಿಗೆಹಾರ, ಚೆನ್ನಗಿರಿ, ಚಿತ್ರದುರ್ಗದಲ್ಲಿ 1 ಸೆಂ.ಮೀ ಮಳೆ ಸುರಿದಿದೆ. ಕರ್ನಾಟಕದ ಒಳನಾಡಿನಾದ್ಯಂತ ಗುಡುಗು ಸಮೇತ ಮಳೆ ಬೀಳಲಿದೆ ಎಂದು ವಾತಾವರಣ ಇಲಾಖೆ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+