ಬ್ರಾಡ್ ಬ್ಯಾಂಡ್: 38 ಸಾವಿರ ಕೋಟಿ ಆದಾಯ
ನವದೆಹಲಿ,
ಜೂ.11: ಕಳೆದ 16 ದಿನಗಳಿಂದ ನಡೆದಿದ್ದ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆ (BWA) ಪರವಾನಗಿ ಹರಾಜಿನಿಂದ ಸರ್ಕಾರಕ್ಕೆ ಒಟ್ಟು 38,000 ಕೋಟಿ ರುಪಾಯಿಗಳ ಆದಾಯ ಸಿಕ್ಕಿದೆ. ಆದರೆ, ಈ ಬಗ್ಗೆ ದೂರ ಸಂಪರ್ಕ ಇಲಾಖೆ (DoT) ಅಧಿಕೃತ ಮಾಹಿತಿ ನೀಡಿಲ್ಲ. id="toptextpromo">3
ಜಿ ಹಾಗೂ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆಯ ಹರಾಜಿನಿಂದ ಸರ್ಕಾರಕ್ಕೆ ಒಟ್ಟು 1.06 ಲಕ್ಷ ಕೋಟಿ ರೂಪಾಯಿಗಳ ಆದಾಯ ಬಂದಿದೆ . ಭಾರ್ತಿ ಏರ್ ಟೆಲ್, ರಿಲಯನ್ಸ್ ,ಟಾಟಾ, ಏರ್ ಸೆಲ್, ವೊಡಾಫೋನ್ ಸೇರಿದಂತೆ ಒಟ್ಟು 11 ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸಿದ್ದವು. id='are-slot-1' class='oiad oi-axt oiadv'> id='top-searched-articles'>ನಿಸ್ತಂತು
ಸೇವೆಯ ಹರಾಜಿನಿಂದ ಹೈ ಸ್ಪೀಡ್ ಇಂಟರ್ ನೆಟ್, ಟಿವಿ ಮತ್ತು ಇಂಟರ್ ನೆಟ್ ಟೆಲಿಫೋನ್ ಸೇವೆ ಪಡೆಯಬಹುದಾಗಿದೆ. ಅಲ್ಲದೆ ಇದನ್ನು ಧ್ವನಿ ಮತ್ತು ಹೈ ಸ್ಪೀಡ್ ಡಾಟಾ ಸೇವೆಗಳಿಗೂ ಬಳಸಿಕೊಳ್ಳಬಹುದಾಗಿದೆ. 3ಜಿ ಸ್ಪೆಕ್ಟ್ರಮ್ ಹರಾಜಿನಿಂದ ಸರ್ಕಾರ ಈಗಾಗಲೇ 67,719 ಕೋಟಿ ರು ಸಂಗ್ರಹಿಸಿದೆ. 70 ಸಾವಿರಕ್ಕೂ ಅಧಿಕ ಹಣ ಹರಿವಿನಿಂದ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಬಹುದಾಗಿದೆ.











Click it and Unblock the Notifications