ಸಖತ್ ಹಾಟ್ ಉದ್ಯೋಗಿಗೆ ಸಿಟಿ ಬ್ಯಾಂಕ್ ಪಿಂಕ್ ಸ್ಲಿಪ್

Debrahlee Lorenzana
ನ್ಯೂಯಾರ್ಕ್, ಜೂ. 4 : ಮಾದಕ ಮೈಮಾಟವನ್ನು ಪ್ರದರ್ಶಿಸುವಂಥ ಕಾಮಪ್ರಚೋದಕ ದಿರಿಸನ್ನು ಧರಿಸಿ ಪುರುಷ ಗ್ರಾಹಕರನ್ನು ಮತ್ತು ಸಹೋದ್ಯೋಗಿಗಳನ್ನು ಸೆಳೆಯುತ್ತಿದ್ದ ಡೆಬ್ರಾಲಿ ಲೊರೆಂಜಾನಾ ಎಂಬ 'ಸಖತ್ ಹಾಟ್' ಉದ್ಯೋಗಿಯನ್ನು ಪಿಂಕ್ ಸ್ಲಿಪ್ ನೀಡಿ ಸಿಟಿ ಬ್ಯಾಂಕ್ ಮನೆಗೆ ಕಳಿಸಿದೆ.

ಬೆಳ್ಳಂಬೆಳಿಗ್ಗೆ ಆಕೆಯನ್ನು ನೋಡದಿದ್ದರೆ ಇತರ ಉದ್ಯೋಗಿಗಳಿಗೆ ಕೆಲಸಕ್ಕೆ ಕೂರಲು ಮನಸ್ಸು ಬರುತ್ತಿರಲಿಲ್ಲ. ಬ್ಯಾಂಕಲ್ಲಿ ಕೆಲಸವಿಲ್ಲದಿದ್ದರೂ ಅನೇಕ ಗ್ರಾಹಕರು ಆಕೆಯನ್ನು ನೋಡಲೆಂದೇ ಬ್ಯಾಂಕಿಗೆ ಪಾದ ಬೆಳೆಸುತ್ತಿದ್ದರು. ಪುರುಷರು ಮಾತ್ರವಲ್ಲ ಸ್ತ್ರೀಯರೂ ಆಕೆಯ ಸೆಳೆತದಿಂದ ಹೊರತಾಗಿರಲಿಲ್ಲ. ಅತಿ ದುಬಾರಿ ಮತ್ತು ಫ್ಯಾಷನೇಬಲ್ ಉಡುಪಿ ಧರಿಸಿ ಇತರ ಮಹಿಳೆಯರ ಹೊಟ್ಟೆಕಿಚ್ಚಿಗೆ ಗುರಿಯಾಗಿದ್ದಳು.

ಆಕೆಯ ಜನಪ್ರಿಯತೆಯಿಂದಾಗಿ ವಿಚಲಿತವಾದದ್ದು ಮಾತ್ರ ಬ್ಯಾಂಕ್ ಮ್ಯಾನೇಜ್ ಮೆಂಟ್. ಡೆಬ್ರಾಲಿಯತ್ತ ಲಕ್ಷ್ಯ ಕೆಲಸದತ್ತ ನಿರ್ಲಕ್ಷ್ಯ ಆಗುತ್ತಿದುದನ್ನು ನೋಡಿದ ಬ್ಯಾಂಕ್ ಅವಳನ್ನು ಕಿತ್ತುಹಾಕಿದೆ. ಆಕೆ ನಿರ್ವಹಿಸುತ್ತಿದ್ದ ಕರ್ತವ್ಯಲೋಪದಿಂದಾಗಿ ಆಕೆಯನ್ನು ತೆಗೆದುಹಾಕಲಾಗಿದೇಯೇ ಹೊರತು ಆಕೆ ಧರಿಸುತ್ತಿದ್ದ ಕಾಮಪ್ರಚೋದಕ ದಿರಿಸಿನಿಂದಲ್ಲ ಎಂದು ಬ್ಯಾಂಕ್ ಹೇಳಿಕೆ ನೀಡಿ ಕೈತೊಳೆದುಕೊಂಡಿದೆ.

ಅವಳ ನಿರ್ಗಮನದಿಂದ ಆಕೆಯನ್ನು ನೋಡಿನೋಡಿಯೇ ಪಾವನರಾಗುತ್ತಿದ್ದ ಸಹಉದ್ಯೋಗಿಗಳಿಗೆ ಶಾನೇ ಬೇಜಾರಾಗಿದೆಯಂತೆ. "ಸಖತ್ ಹಾಟ್ ಆಗಿದ್ದಳಮ್ಮ", "ಸಿಟಿಬ್ಯಾಂಕಿಗೆ ಗ್ರಾಹಕರನ್ನು ಸೆಳೆಯಲು ಇಂಥ ಉದ್ಯೋಗಿಯೇ ಬೇಕು", "ಆಕೆ ಇಲ್ಲದಿರುವುದು ತುಂಬಾ ಬೇಜಾರಾಗಿದೆ", "ಹತ್ತಿರ ಸುಳಿದಾಗಲೆಲ್ಲ ಸಂಚಲವುಂಟುಮಾಡುತ್ತಿದ್ದಳು" ಎಂದೆಲ್ಲ ಉದ್ಯೋಗಿಗಳು ಮತ್ತು ಗ್ರಾಹಕರು ಆಕೆಯ 'ಗುಣಗಾನ' ಮಾಡಿದ್ದಾರೆ.

ಕೆಲಸ ಕಳೆದುಕೊಂಡಿದ್ದಕ್ಕೆ ತಲೆಕೆಡಿಸಿಕೊಳ್ಳದ ಡೆಬ್ರಾಲಿ ಮತ್ತೊಂದು ಹಣಕಾಸು ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+